ಶುಕ್ರವಾರ, ಫೆಬ್ರವರಿ 23, 2007

ನೋಟೀಸು ಪಿರಿಯಡ್ಡು ಮತ್ತು ಉರ್ಲು !

ನಾನು ಸಾಫ್ಟ್ ವೇರ್ ಕಂಪನಿಯ hr ವಿಭಾಗದಲ್ಲಿರುವವನು. ದಿನಾ ಒಬ್ಬರಲ್ಲ ಒಬ್ಬರ ಜೊತೆ ಫೋನಿನಲ್ಲಿ ಮಾತಾಡೋದು, ಸಂದರ್ಶನಗಳನ್ನ schedule ಮಾಡೋದು ಇದ್ದಿದ್ದೇ. ದಿನಾ ಒಂದೇ ತೆರನಾದ ಕೆಲ್ಸ ಆದರೂ, ಏನಾದರೂ ವಿಶೇಷ ಘಟಿಸಿಯೇ ಘಟಿಸುತ್ತದೆ.

ಇಂಟರ್ವ್ಯೂ ಗೆ ಬಾರದ ಕ್ಯಾಂಡಿಡೇಟುಗಳು, ನಾವು ಫೋನಿಸಿದ ಕೂಡಲೇ, ತಮಗೆ accident ಆಗಿ ಬಿಟ್ಟಿದೆಯೆಂದೂ, ಸಿಕ್ಕಾಪಟ್ಟೇ ಪೆಟ್ಟಾಗಿದೆಯೆಂದೂ ಮರುಕ ಹುಟ್ಟಿಸುವ ಭಾಷೆಯಲ್ಲಿ ಮಾತನಾಡಲು ಶುರು ಮಾಡಿಕೊಳ್ಳುತ್ತಾರೆ. ಎಂತವನ ಹೃದಯವೇ ಆದರೂ ಕರಗಲೇ ಬೇಕು! "ಸಾರ್, ಸೀವಿಯರ್ ವೂಂಡ್ ಸಾರ್ , ಸಾರಿ ಸಾರ್ " , "ಸರ್ ಐ ಆಮ್ ನಾಟ್ ಏಬಲ್ ಟು ವಾಕ್ ಸರ್, ಐ ವಿಲ್ ಡೆಫೆನೆಟ್ಲ್ಲಿ ಮೇಕ್ ಇಟ್ ಟುಮಾರೋ" ಅಂತೆಲ್ಲ ವದರುತ್ತಾರೆ. ಅವನಿಗೆ ಅದು ಮೊದಲ ಆಕ್ಸಿಡೆಂಟು! ಪಾಪ.. ನಮ್ಮ ಕಿಸೆಯೊಳಗೆ ಇಂತಹ ೫೦- ೬೦ ಆಕ್ಸಿಡೆಂಟುಗಳು ಈಗಾಗಲೇ ಇರುತ್ತವೆ. ಇಂಟರ್ವ್ಯೂ ಗೆ ಬರಲಾಗದ ಶೇಕಡಾ ೭೫% ಜನಕ್ಕೆ ಆಕ್ಸಿಡೆಂಟೇ ಆಗಿರುವುದು ವಿಶೇಷ. ಮತ್ತೆ ಕೆಲ ಜನರ ಸಂಬಂಧಿಕರಿಗೆ ಕಾಯಿಲೆಯಾಗಿರುತ್ತದೆ.... ನಮ್ಮ ಪ್ರವೀಣನೋ, ಸಂತೃಪ್ತಿಯೋ ಫೋನಿಟ್ಟು "ಆಕ್ಸಿಡೆಂಟು" ಅಂದರೆ ಸಾಕು, ಮುಂದೇನೂ ಯಾರೂ ಹೇಳಬೇಕಾಗಿಯೇ ಇಲ್ಲ! ಬಿದ್ದು ಬಿದ್ದು ನಗುವುದೇ ಕೆಲಸ. ನಾನು, ಪ್ರವೀಣ ಇಬ್ಬರೂ ೧೦೦ ಆಕ್ಸಿಡೆಂಟಾದ ಮೇಲೆ ಒಂದು ಸಮಾರಂಭ ಮಾಡಬೇಕು ಅಂತ ತೀರ್ಮಾನಿಸಿದ್ದೇವೆ!

ಮೊನ್ನೆ ಒಬ್ಬ ಪುಣ್ಯಾತ್ಮನಿಗೆ ಫೋನ್ ಮಾಡಿದ್ದೆ "ನಿನ್ನ ಈಗಿನ ಸಂಬಳ ಎಷ್ಟು?, ಎಷ್ಟು ಬೇಕು ಎಲ್ಲ ಕೇಳಿಯಾದ ಮೇಲೆ", "What is your notice period" ಅಂದೆ. ( ಬೇರೆ ಕೆಲಸಕ್ಕೆ ಸೇರಲು ಎಷ್ಟು ದಿನ ಬೇಕು ಅಂತ) ಇದು ಎಲ್ಲ ಕಡೆಯೂ, ಎಲ್ಲರೂ ಕೇಳುವ ಅತ್ಯಂತ ಮಾಮೂಲಿ ಪ್ರಶ್ನೆ. ಅದಕ್ಕಾತ," from morning 9 to evening 6pm sir" ಅಂದು ಬಿಡಬೇಕೆ! ನಗು ತಡೆದುಕೊಂಡು , "ನೋ ನೋ, i am asking about your notice period" ಅಂತ ಮತ್ತೊಮ್ಮೆ ಬಿಡಿಸಿ ಹೇಳಿದೆ.. "sometime it varries sir, from 9am till 8-9pm sir", "i am ready to work for overtime".. ಆಹ್! ನಂಗೆ ಬರುವ ನಗು ತಡೆದುಕೊಳ್ಳಲಾಗದೆ, "i will call you later" ಅಂತಂದು ಫೋನ್ ಇಟ್ಟೆ.

ಒಂದಿನ ಬೆಳಗ್ಗೆ ಯಾರೋ ಒಬ್ಬಾತ ,ಫೋನ್ ಮಾಡಿ " ನಿಮ್ಮ ಕಂಪನಿಯ ಉರ್ಲ್ ಕೊಡಿ"ಅಂದ! ಅರೇ, ನಮ್ಮ ಕಂಪನಿ ಸಾಫ್ಟ್ ವೇರ್ ಬಿಟ್ಟು ನೇಣಿನ ಹಗ್ಗ ತಯಾರ್ ಮಾಡೋದು ಯಾವಾಗ ಶುರು ಮಾಡಿತಪ್ಪ ಅಂತ ಅಂದುಕೊಂಡು "ಸಾರಿ, i did'nt get u" ಅಂದೆ. ಅವನೋ ಮತ್ತೆ ಮತ್ತೆ " please give your ಉರ್ಲ್" ಅಂತಿದಾನೆ. ಸ್ವಲ್ಪ ಹೊತ್ತಿನ ಮೇಲೆ ಗೊತ್ತಾಯ್ತು, ಅವನು ಕೇಳಿದ್ದು "url" ಅಂತ. ಯು ಆರ್ ಎಲ್ ನ ಅವನು "ಉರ್ಲ್" ಮಾಡಿ ಬಿಟ್ಟಿದ್ದ!

ಮತ್ತೆ ಯಾರದೋ ಫೋನ್ ಬರ್ತಿದೆ, ಯಾರಿಗೆ ಏನು ಬೇಕೋ, ಎಲ್ಲಿ ಯಾರಿಗೆ ಆಕ್ಸಿಡೆಂಟಾಯ್ತೋ...

16 ಕಾಮೆಂಟ್‌ಗಳು:

Avani ಹೇಳಿದರು...

its fantastic man

Sushrutha Dodderi ಹೇಳಿದರು...

ಹಹ್ಹಹ್ಹಹ್ಹ! ಏನ್ಮಾಡೋದು ಎಚ್ಚಾರ್ ಸಾಯೇಬ್ರೇ, ನಮಗೆ ಒಂದೇ ದಿನ ಎರಡೂ-ಮೂರು ಇಂಟರ್ವ್ಯೂಸ್ ಅಟೆಂಡ್ ಮಾಡೋದಕ್ಕಿರೊತ್ತೆ. ಹಾಗಾಗಿ ಇಂತಹ 'ನಿಮಗೆ ನಗು ಬರಿಸುವ' ಸುಳ್ಳು ಕಾರಣಗಳನ್ನು ಹೊಸೆಯಬೇಕಾಗುತ್ತೆ...

ಹಹ್ಹ, ಚನಾಗ್ ಬರ್ದಿದೀರ...

Anveshi ಹೇಳಿದರು...

ಛೆ... ನೀವು ಈ ಥರ ನಮ್ಮ ಮರ್ಯಾದೆ ತೆಗೀತೀರೀಂತ (ಇದ್ದರೆ) ಗೊತ್ತಿರ್ಲಿಲ್ಲ...
ನಾವೇನೋ ನಿಮ್ಮಲ್ಲಿಗೆ ಅಪ್ಲೈ ಮಾಡ್ಬೇಕೂಂತಿದ್ರೆ.... ಹೀಗಾ ಎಲ್ಲಾ ಬಯಲುಗೊಳಿಸೋದು....????
ಹೋಗ್ಲಿ... ಇನ್ನು ನಿಮ್ಮಲ್ಲಿಗೆ ಬರೋದಿಕ್ಕೆ ತಪ್ಪಿ ಹೋದ್ರೆ ಯಾವ ನೆಪ ಹೇಳ್ಬೇಕೂಂತಾನಾದ್ರೂ ಹೇಳ್ಕೊಡಿ!!!!

Annapoorna Daithota ಹೇಳಿದರು...

ಸಖತ್ತಾಗಿದೆ..... :) :) :) ನಗು ತಡ್ಯೋಕಾಗ್ತಿಲ್ಲ ಮಾರಾಯಾ !!!!!!!

ಅಂದ್ ಹಾಗೆ..... ನಾನು ಏನ್ ಆಕ್ಸಿಡೆಂಟ್ ಅಂತ ಹೇಳ್ಳೀ ;)

ಮನಸ್ವಿನಿ ಹೇಳಿದರು...

ಶ್ರೀನಿಧಿ,

ಲೇಖನ ಚೆನ್ನಾಗಿದೆ...ನಿಮ್ಮ ಕಷ್ಟ ನಿಮಗೆ, ನಮ್ಮ ಕಷ್ಟ ನಮಗೆ ಕಣಯ್ಯ
ಒಂದೊಂದು ಸಲ ಒಂದು ದಿನಕ್ಕೆ ಒಂದಕ್ಕಿಂತ ಜಾಸ್ತಿ interview ಇದ್ರೆ ಹೀಗೆ ಆಗುತ್ತೆ..
ಇದೆಲ್ಲ ಮಾಮೂಲ್ ಕಥೆ ಅಲ್ವಾ?

ಉರ್ಲು --- ಹ ಹ ಹ :))

ಅನಾಮಧೇಯ ಹೇಳಿದರು...

ಕರ್ಮ ಕಾ೦ಡ ...
ಹಹ್ಹ............
ಯಪ್ಪಾ ನಗು ತಡಿಯೊಕೆ ..........ಆಗ್ತಾ ಇಲ್ಲ.........
ಏನ್ ಮಾಡೋದು ಹೇಳಿ ನಿಮ್ಮತರ.....
ಎಲ್ಲರಿಗೂ ತಾವಾಡುವ ಭಾಷೆಯ ಮೇಲೆ ಸೀಮಿತ ಇರೋಲ್ಲ
ಅದಿಕ್ಕೆ ಉರ್ಲು............
ಹಹ್ಹಾ.........
ಅ೦ತಾರೆ....
ಹೋಗ್ಲಿ ಬಿಡಿ...
ಸುಪ್ಪರ್ ಆಗಿದೆ ................

Parisarapremi ಹೇಳಿದರು...

ನೀನು ಅಷ್ಟೆ ಕಣಪ್ಪ.. ನಿನ್ನ ಬ್ಲಾಗನ್ನು update ಮಾಡಿದ ತಕ್ಷಣವೇ ಉರ್ಲನ್ನು ನನಗೆ ಕಳಿಸಿಬಿಡು. ತಡವಾಗಿ ಓದೋದು ತಪ್ಪುತ್ತೆ ನೋಡು...

ಇದುವರೆಗೂ ಎಲ್ಲಾ ಕಡೆ, HR ಗಳನ್ನು ತಮಾಷೆ ಮಾಡಿರೋದನ್ನು ಓದಿದ್ದೆ. ಈಗ ಇದನ್ನು ಓದಿ ಖುಷಿ ಆಯ್ತು. ಯಾರುಯಾರು HR ಬಗ್ಗೆ email ಕಳ್ಸಿದ್ರೋ, ಅವರಿಗೆಲ್ಲ ನಿನ್ನ ಬ್ಲಾಗಿನ ಉರ್ಲನ್ನು ಕೊಡ್ತೀನಿ, "ಬಡ್ಡಿ ಮಕ್ಳಾ, ಇದನ್ನು ಒಂದು ಸಲ ನೋಡಿ" ಅಂತ ಹೇಳಿ.

ಇನ್ನು ಮುಂದೆ, URL ಅನ್ನು ಉರ್ಲು ಎಂದೇ ಕರೆದರೆ ಹೇಗೆ? ಸಕ್ಕತ್ ಅಲ್ವಾ?

Nice article.. :-)

ಅನಾಮಧೇಯ ಹೇಳಿದರು...

Good Article......hope our problems will atleast reduce little...

Shivakumara ಹೇಳಿದರು...

Shri,

I would like to link up your blog from my website. I couldnt find your mail id.

Please reply shivuks on gmail so, that i can send you request.. .:)

regards,

:)

ಅನಾಮಧೇಯ ಹೇಳಿದರು...

ಅಯ್ಯಯ್ಯೋ, ಈ 'ಹೆಚ್ಚಾರು'ಗಳ ಸಹವಾಸ ಅಲ್ಲಪ್ಪಾ. ನೀನು ಬ್ಲಾಗ್ ಬರ್ದಿರೋ ಮಾರನೇ ದಿನನೇ ನಂಗೊಂದು ಸಂದರ್ಶನ ಇತ್ತು. ನಂಗೆ ಹೋಗೋಕೆ ಇಷ್ಟ ಇರಲಿಲ್ಲ. ಸುಮ್ನೆ ಏನೇನೋ ಕಾರಣ ಕೊಟ್ಟು ನಗೆ ಪಾಟಲಿಗೆ ಈಡಾಗುವುದು ಬೇಡ ಅಂತ (ನಿನ್ನ ಬ್ಲಾಗ್ ನೋಡಿ ಬುದ್ಧಿ ಬಂದಿದ್ದು) due to some unavoidable reasons,i m not attending the interview ಅಂತ ಹೇಳಿ ಸುಮ್ನಾಗಿಬಿಟ್ಟೆ.. ಹ್ಹ್ಹಿ ಹ್ಹಿ.

ಇದನ್ನೂ ನಿಂಗೆ ಹೇಳ್ವಾರ್ದಿತ್ತು (ನಮ್ಮ ಇನ್ನೊಂದು ರಹಸ್ಯ ಬಿಟ್ಕೊಂಟ್ಟಂಗೆ ಆಯ್ತು), ಆದ್ರೂ ... ಇರ್ಲಿ ಪಾಪ ಹೆಚ್ಚಾರು :)

ಚೆನ್ನಾಗಿ ಬರ್ದಿದಿಯಾ ...

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರವೀಣ,
ಏನ್ ಫೆಂಟಾಸ್ಟಿಕ್ಕೋ ಏನೋ:)


ಸುಶ್, ಮನಸ್ವಿನೀ,

ಸತ್ಯ ಹೇಳ್ರಪ್ಪಾ:) ನಾವು ನೀವು ಇಂಟರ್ವ್ವೂಗ್ ಬರ್ತೀರಿ ಅಂದುಕೊಂಡು ಇಂಟರ್ವ್ಯೂ ಮಾಡೋರನ್ನ ರೆಡಿ ಮಾಡಿಸಿ ಕಾದು ಕೂತರೆ, ಹೀಗೆ ಆಕ್ಸಿಡೆಂಡು ಅಂದರೆ ಹೇಗಾಗಬೇಡ!!

ಅಸತ್ಯಾನ್ವೇಷಿಗಳೇ, ಅನ್ನಪೂರ್ಣಾರೇ.
ಬೇರೇ ಏನಾರೋ ಹೊಸಾ ಕಾರಣ ಹುಡುಕಿ , ಇಲ್ಲಾ ಸತ್ಯ ಹೇಳ್ಬಿಡಿ:) ಏನಂತೀರ? ನಾನೇ ನಿಮಗೆ ಐಡಿಯಾ ಕೊಟ್ರೆ,"ಹೆಚ್ಚಾರು ಎತಿಕ್ಸ್" ನ ಮೀರಿದ ಹಾಗೆ ಆಗತ್ತಲ್ಲ?:)

ಶ್ರೀನಿಧಿ.ಡಿ.ಎಸ್ ಹೇಳಿದರು...

ಅರುಣ್,
ನೀವ್ ಹೇಳೋದೇನೋ ಓಕೆ, ಆದ್ರೆ "ಉರ್ಲೇ" ಅಭ್ಯಾಸ ಆಗಿ ನಾನು ಎಲ್ಲರ ಹತ್ತಿರನೂ ಹೀಂಗೇ ಹೇಳ್ಕೊಂಡು ಓಡಾಡಿದ್ರೆ, ಅಷ್ಟೇ ಮತ್ತೆ!!

ಹೆಚ್ಚಾರನನ್ನು ಸಪೋರ್ಟು ಮಾಡಿದ ಪುಣ್ಯ ಸದಾಕಾಲ ಸಹಾಯ ಮಾಡತ್ತೆ ನಿಮ್ಗೆ..

ಪುಷ್ಪಾ,

:)ಪ್ರತಿಕ್ರಿಯೆಗೆ ಧನ್ಯವಾದ!

Santripti,
hope so, replys nodidre hange ansatte:)

ವಿಕಾಸಾ!

ನೀನು ಪ್ರಾಮಾಣಿಕ ನೋಡು, ನನ್ ಬರಹ ಓದಿ ಇಷ್ಟಾರು ಮಾಡಿದಿಯಲ್ಲ, ನನ್ನ ಶ್ರಮ ಸಾರ್ಥಕ!!

Gubbacchi ಹೇಳಿದರು...

ತುಂಬಾ ಚೆಂದವಾಗಿ ಬರೆದಿದ್ದೀರಿ. ನಗು ತಡೆಯಲಿಕ್ಕಾಗಲಿಲ್ಲ.

Lanabhat ಹೇಳಿದರು...

ಅಂತೂ ಇಂತಹಾ ಉರುಲು ಪ್ರಕರಣಗಳಿಂದ ನಿಮಗಂತೂ ಬಿಟ್ಟಿ ಮನೋರಂಜನೆ....

ಸುಪ್ತದೀಪ್ತಿ suptadeepti ಹೇಳಿದರು...

@ಅನ್ವೇಷಿ: "ಇನ್ನು ನಿಮ್ಮಲ್ಲಿಗೆ ಬರೋದಿಕ್ಕೆ ತಪ್ಪಿ ಹೋದ್ರೆ ಯಾವ ನೆಪ ಹೇಳ್ಬೇಕೂಂತಾನಾದ್ರೂ ಹೇಳ್ಕೊಡಿ!!!!"-- ಅನ್ವೇಷಿಗಳೇ, ತುಂಬಾ ಸುಲಭ. "ನಿಮ್ಮಲ್ಲಿ ಬರೋದನ್ನ ನಿಮ್ಮ 'ಉರ್ಲ್' ತಪ್ಪಿಸಿತು, ಧನ್ಯವಾದ" ಅಂದರಾಯಿತು.

Preethi Shivanna ಹೇಳಿದರು...

rofl