ಗುರುವಾರ, ಜುಲೈ 12, 2007

ಒಂದು ಫೋನ್ ಕಾಲು ಅಥವಾ ಮತ್ತೆ HR ಕಥೆಯು.

"ನಮಸ್ತೇ, ನಾನು ಸುನೀತಾ ಹತ್ರ ಮಾತಾಡ್ತಿದೀನಾ?"

ತುಸು ಮೌನ, ನಂತರ..

ನೀವ್ ಯಾರು ಮಾತಾಡೋದು?

"ನಾನು ಶ್ರೀನಿಧಿ ಅಂತ, ಒಂದು ಕಂಪನಿಯಿಂದ ಕಾಲ್ ಮಾಡ್ತಿದೀನಿ, ಜಾಬ್ ಓಪನಿಂಗ್ ಬಗ್ಗೆ ಮಾತಾಡ್ಬೇಕಿತ್ತು ಅವರ ಹತ್ತಿರ,
ನೀವ್ಯಾರು ಮಾತಾಡೋದು, ಸುನೀತಾನೇನಾ?"

ಅಲ್ಲ, ನಾನು ಅವಳ ಫ್ರೆಂಡು, ರೂಪಾ ಅಂತ..

"ಹೌದಾ, ಓಕೆ ಅವರು ಎಷ್ಟ್ ಹೊತ್ತಿಗೆ ಸಿಗ್ತಾರೆ?, ಆಮೇಲ್ ಮಾಡ್ತೀನಿ ಬಿಡಿ"

ಓಕೆ.. ಹೇಯ್ ಸುರೇಶ್, ಒಂದ್ ನಿಮಿಷಾ.. ನಾನು ಸುನೀತಾನೇ ಮಾತಾಡ್ತಿರೋದು ಇಲ್ಲಿ..

"ನಾನು ಶ್ರೀನಿಧಿ, ಸುರೇಶ್ ಅಲ್ಲ.."

ಸುಮ್ನಿರೋ ಸುರೇಶಾ, ಸಾಕು ಕಂಡಿದೀನಿ... ಪ್ರತೀ ಸಲನೂ ನೀನು ನನ್ನ ಫೂಲ್ ಮಾಡೋಕಾಗಲ್ಲ! ಆವತ್ತೇನೋ ಗೊತಾಗಿಲ್ಲ, ಏನ್ ಇವತ್ತೂ ಆಗ್ ಬಿಡ್ತೀನಿ ಅಂದ್ಕೊಂಡಿದೀಯಾ?, ಹೋಗಲೇ..

"ಹೇ, ಇಲ್ಲ ನಾನು ಶ್ರೀನಿಧಿ, ಕಾಲಿಂಗ್ ಫ್ರಾಂ.. "

ಹಾ ಹಾ, ಶ್ರೀನಿಧಿ ಅಂತೆ ಶ್ರೀನಿಧಿ!ಹೆಸ್ರು ಚನಾಗಿದೆ! ಇದೇನಿದು ಈ ಸಲ ಕಂಪನಿ, ಕೆಲ್ಸ ಅಂತ ಹೊಸ ತರಾ ತಮಾಶೆ ಮಾಡ್ತಿದೀಯಾ?! ಈ ಸಲ ನನ್ನ ಫೂಲ್ ಮಾಡೋಕಾಗಲ್ವೋ ನಿನ್ ಕೈಲಿ! ನಾನೇ ಗೆದ್ದೆ.. ಯಾಹೂ!

" ಹಲೊ, ಒಂದ್ ನಿಮಿಷ , ನನ್ ಮಾತ್ ಸ್ವಲ್ಪ ಕೇಳ್ತೀರಾ?, ನಾನು ಸತ್ಯವಾಗ್ಲೂ ಶ್ರೀನಿಧಿ ಅಂತಾನೇ ಕಾಲ್ ಮಾಡಿರೋದು, ನಂಗೆ ಸುರೇಶ ಯಾರೋ ಗೊತ್ತಿಲ್ಲ ಕಣ್ರೀ... ನಮ್ ಕಂಪ್ನಿಲಿ ಕೆಲ್ಸ ಖಾಲಿ ಇದೆ , ನೋಡಿ ನಿಮ್ ಪ್ರೊಫೈಲ್ ಲಿ ಇಂತಿಂತಾ ಪ್ರೊಜೆಕ್ಟ್ ಡೀಟೈಲ್ಸ್ ಇವೆ... ಇದು ನಿಮ್ ಮೈಲ್ ಐಡಿ.."

ಹೆ ಹೆ ಹೆ.. ಹೌದಾ?.. ನಾನು.. ನಾನು.. ತಪ್ ತಿಳ್ಕೊಂಡೆ.. ಸಾರಿ.. just a sec..

ಆ ಕಡೆಯಿಂದ ಫೋನ್ ಲೈನ್ ಕಟ್, ಮತ್ತೆ ಮಾಡಿದರೆ ಸ್ವಿಚ್ ಆಫ್..

ಮತ್ತೆ ಹೊಸ ರೆಸ್ಯೂಮು ಹುಡುಕಿ ಕೆಲ್ಸ ಮುಂದುವರಿಸಿದೆ.

15 ಕಾಮೆಂಟ್‌ಗಳು:

Unknown ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದರು...

"ಒಂದು ಫೋನ್ ಕಾಲು ಅಥವಾ ಮತ್ತೆ HR ಕಥೆಯು."
Kathe thumba channagide.ninage ee paaty HR kathe siktha irodu thumba santhosha.Hage nandondu salahe!!! ninyake Suresh antha mathnadalilla neenu mathadidre Hudugi biltha idlo eno?????.."SIKKA AVAKASHA BIDABARADU" Any how mundinsala try madu!!!!!!!!!!bidru bilbahudu???

Sushrutha Dodderi ಹೇಳಿದರು...

ಶ್ರೀನಿಧಿ ಡಾರ್ಲಿಂಗ್, ಎಚ್ಚಾರ್ ಕತೆಗಳು ಚೆನ್ನಾಗಿ ಮೂಡಿಬರುತ್ತಿವೆ. ಇದಂತೂ ಸಖ್ಖತ್ ಎಂಟರ್ಟೈನಿಂಗ್ ಆಗಿದೆ. ಆದ್ರೆ ನೀನು ನಿಶ್ಚಿತ್ ಹೇಳಿದಂಗೆ ಮಾಡಿ ನಂಗೆ ಮೋಸ ಮಾಡಲ್ಲ ತಾನೆ? :) :)

ಅನಾಮಧೇಯ ಹೇಳಿದರು...

ಶೀ,
ಘಮ್ಮತ್ ಆಗಿ ಇದೆ ನಿನ್ನ HR ಕಥೆ. ಸುಪರ್ ಕಣೋ.
ಎನ್ ಮರಯಾ ನಿನ್ನ ಕೆಲಸ ಸಕತ್ ಆಗಿ ಇದೆಯಲ್ಲಾ. ದಿನ ದಿನವೂ ಹೊಸ ಹೊಸ ಕಥೆ, ಹೊಸ ಹೊಸ ಜನ, ಹೊಸ ಹೊಸ ಭಾಷೆ. ಈ ಕಥೆ ಮಾತ್ರ ನನ್ನ ಮೂಡು ಸರಿ ಮಾಡಿ ಬಿಡ್ತು. ನಕ್ಕು ಬಿಟ್ಟಿ. ನಮ್ಮ ಆಫೀಸ್ ನಲ್ಲಿ ಎಲ್ಲಾ ನಂಗೆ ನೋಡತಾ ಇದ್ದಾರೆ ಇವಳಿಗೆ ಎನಾತಪ್ಪ ಇದ್ದಕಿದ್ದ ಹಾಗೆ ನಗಾಡ್ತಾ ಇದಾಳೆ ಹೇಳಿ.
ಕೀಪ್ ಇಟ್ ಅಪ್. ಚನ್ನಾಗಿ ಬರದ್ದೆ.

ವಿ.ರಾ.ಹೆ. ಹೇಳಿದರು...

ಹ್ಹ ಹ್ಹ ಹ್ಹ... ನೀನು, ನಿನ್ ಹೆಚ್ಚಾರ್ ಕೆಲ್ಸ, ಅದ್ರಲ್ಲಾಗೋ ಇಂಥವು, ಅದನ್ನ ಬ್ಲಾಗಿಸೋದು...

ಒಟ್ನಲ್ಲಿ ನಮಗಂತೂ ಮಜಾ ಬರ್ತಾ ಇದೆ . ಹೀಗೆ ಬರಲಿ ಹೆಚ್ಚಾರ್ ಸರಣಿ.... :-)

Srikanth - ಶ್ರೀಕಾಂತ ಹೇಳಿದರು...

shreenidhi... oh! sorry... suresh, nimma kathe tumba chennaagide... intha naaTakagaLalli paatradhaari aagaloo puNya beku!

ಸಿಂಧು sindhu ಹೇಳಿದರು...

hha hha hha..

thank you suresh.. :D

ಮನಸ್ವಿನಿ ಹೇಳಿದರು...

:))))

ನಂದಕಿಶೋರ ಹೇಳಿದರು...

ಪಂಚತಂತ್ರಶೈಲಿಯ ಶೀರ್ಷಿಕೆ ಹೈಕ್ಲಾಸ್ :) !!!

ನಿಮ್ಮ ಡಾರ್ಲಿಂಗುಗಳಿಗೆ ಬೇಸರವಾಗದಿದ್ದರೆ ಅದನ್ನು "ಶ್ರೀನಿಧಿಯ ’ಸುನೀತ’ಗಳು ಅಥವಾ ಮತ್ತೆ HR ಕಥೆಯು" ಅಂತ ಬದಲಿಸಬಹುದಿತ್ತೋ ಏನೋ. :)

ಒಳ್ಳೆ ಲೇಖನ ಇದು. ಬರೀತಿರಿ.

ಅನಾಮಧೇಯ ಹೇಳಿದರು...

ondu software company nalli yavde post navrigu e tarada entertainment sigalla...enjoy your work with such incidents :) n also do share with us...

Parisarapremi ಹೇಳಿದರು...

ಒಳ್ಳೇ ಕರೆ!!

ಯಾರ ಕಮೆಂಟಿಗೂ ರಿಪ್ಲೈ ಮಾಡದ ಶ್ರೀನಿಧಿ (ಅಲಿಯಾಸ್ ಸುರೇಶ್)ಯವರ ಈ ಕೃತ್ಯ ಖಂಡನೀಯ!

ಶ್ರೀನಿಧಿ.ಡಿ.ಎಸ್ ಹೇಳಿದರು...

nischith,
ಇಂತಾ ಕರೆ ಸಾರ್ವ ಮಾಡ್ತೀನಿ ಮಾರಾಯ! ಎಲ್ಲರ್ನೂ ಟ್ರಯ್ ಮಾಡ್ತಾ ಕೂತ್ರೆ ಅಷ್ಟೇ ಕಥೆ ನಂದು!:)

ಸುಶ್,
ನಿಂಗ್ ಮೋಸ ಮಾಡ್ತೀನೇನೋ:)!

ರಂಜು,
ನಿನ್ ಮೂಡ್ ಸರಿಯಾದ್ದು ಸಂತೋಷ.

ವಿಕಾಸ್,
ಅದೇನೋ ಅಂತಾರಲ್ಲ, ಬೆಕ್ಕಿಗೆ ಆಟ...:)

ಶ್ರೀಕಾಂತ್,
ಏನ್ ಪುಣ್ಯಾನೋ ಏನೋ, ದಿನಕ್ಕೊಂದು ತರ ನಾಟ್ಕ ಆಗ್ತಾ ಇರತ್ತೆ ಸಾರ್!ಪಾತ್ರಧಾರಿ ಆಗೀ ಆಗೀ ಸಾಕಾಗೋಗಿದೆ.

ಸಿಂಧು,
ನಂಗೆ ಸುರೇಶ್ ಅನ್ನೋ ಹೆಸ್ರು ಖಾಯಂ ಆಗೋ ಭೀತಿ ಉಂಟಾಗಿದೆ!

ಮನಸ್ವಿನಿ,

:D


ಯಾತ್ರಿಕ,
ತುಂಬಾ ಸೂಪರ್ ಟೈಟಲ್ಲು, ಮುಂದಿನ ಬರಹಗಳಿಗೆ ಗಮನದಲ್ಲಿಟ್ಟುಕೊಳ್ಳಾಲಾಗುವುದು:)

ಅನಾನಿಮಸ್,
ಎಲ್ಲ ಕಡೆಗೂ ಇಂತದ್ದು ಆಗ್ತಾ ಇರತ್ತೆ. ಒಬ್ಬೊಬ್ರ ಫೀಲ್ಡಲ್ಲಿ ಒಂದೊಂದು ತರ, ಅಲ್ವಾ?

ಅರುಣ,
ತಮ್ಮ ಖಂಡನೆಯನ್ನ ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕಾಗಿ ಕೋರಿಕೆ!

ವಿನಾಯಕ ಭಟ್ಟ ಹೇಳಿದರು...

ಕತೆ ತುಂಬಾ ಚೆನ್ನಾಗಿದೆ.ಎಚ್ ಆರ್ ಕತೆಗಳು ಅಂತ ಒಂದು ಪುಸ್ತಕ ಮಾಡಬಹುದೇನೊ.

Lanabhat ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Lanabhat ಹೇಳಿದರು...

ಗಮ್ಮತ್ತಿದೆ ಸ್ವಲ್ಪ ಹೊತ್ತು ಹ್ನಾ ನನು ಸುರೇಶ್ ಮಾತಾಡ್ತಾ ಇದ್ದೇನೆ ಅಂದಿದ್ರೆ ಶ್ರೀನಿಧಿ ಅಂತ ಒಪ್ತಿದ್ರೋ ಎನೋ :D