ಬುಧವಾರ, ಜುಲೈ 18, 2007

ರಸ್ತೆಗಳೆಂದರೆ...

ರಸ್ತೆಗಳೆಂದರೆ ಭೂಮಿಗೆ
ಮನುಷ್ಯ ರಚಿಸಿಕೊಟ್ಟ
ಕೃತಕ ನಾಲಿಗೆಗಳು.
ಮೈಮೇಲೆಲ್ಲ ಕೆತ್ತಿದ್ದಾನೆ,ಕಡೆದಿದ್ದಾನೆ
ಸಿಮೆಂಟು,ಡಾಂಬರು ಮಣ್ಣು ಎಲ್ಲದರ ನಾಲಗೆಯ
ತನ್ನ ಸೃಷ್ಟಿಯ ರುಚಿ ತೋರಿಸಲು!

ಅವಳ ನಿಜದ ನಾಲಗೆ ಅಲ್ಲೆಲ್ಲೋ ದೂರ
ಕಾಡಲ್ಲಿ ಮೆತ್ತಗೆ ಮಲಗಿರಬೇಕು
ತರಗೆಲೆಗಳಡಿಯಲ್ಲಿ.
ಇಲ್ಲಿ ಅವಳ ಈ ಕೃತಕ ನಾಲಗೆಯ ಗ್ರಂಥಿಗಳು
ಏನನ್ನ ಅನುಭವಿಸುತ್ತಿರಬಹುದು,
ರುಚಿ ಹೇಗಿರಬಹುದು ಎಂಬ ಸೋಜಿಗ ನನಗೆ.

ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು
ಶವಯಾತ್ರೆಯ ಮೆರವಣಿಗೆ,
ಅಪಘಾತದಿ ತೊಟ್ಟಿಕ್ಕುವ ರಕ್ತ,
ಪ್ರತಿಭಟನೆ ನಡೆಸುವ ಸಾಲು ಕಾಲುಗಳು
ಯಾರದೋ ಮನೆಯಿಂದ ಹೊರಬಿದ್ದ ಪಾತ್ರೆ ಪಗಡ.
ನಡು ರಾತ್ರೆ ತರಿದು ಬಿದ್ದ ಮಲ್ಲಿಗೆಯ ಮಾಲೆ..
ದಿಗಿಲಾಗುತ್ತದೆ ನನಗೆ.

ಸಮಾಧಾನ ಪಟ್ಟುಕೊಳ್ಳುತ್ತೇನೆ, ನೆನಪಿಸಿಕೊಂಡು
ಮಣ್ಣ ದಾರಿಯ ಮಳೆಯ ತಂಪು
ಹಳೆ ದಾರಿಯಲಿ ಸೈಕಲೋಡಿಸುವ ಹೊಸ ಹುಡುಗನ ಖುಷಿ
ಮರಗಳಿಂದುದುರಿದ ಹೂವಿಂದ ಮುಚ್ಚಿದ ರಸ್ತೆ,
ಈಗ ತಾನೆ ನಡೆಯಲು ಕಲಿತು ಹೆಜ್ಜೆಯಿಡೋ ಪುಟ್ಟ ಪಾದ,
ಇವೆಲ್ಲದರ ರುಚಿ ಅನುಭವಿಸುವಂತದ್ದೇ,
ಅಲ್ಲವೇ?
ರಸ್ತೆಗಳೆಂದರೆ .....

14 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು
........................
ಮರಗಳಿಂದುದುರಿದ ಹೂವಿಂದ ಮುಚ್ಚಿದ ರಸ್ತೆ,
ಈಗ ತಾನೆ ನಡೆಯಲು ಕಲಿತು ಹೆಜ್ಜೆಯಿಡೋ ಪುಟ್ಟ ಪಾದ,
e salugaLu nijvaglu touchy...chennagide

ಅನಾಮಧೇಯ ಹೇಳಿದರು...

"ರಸ್ತೆಗಳೆಂದರೆ..."

ಅವಳ ನಿಜದ ನಾಲಗೆ ಅಲ್ಲೆಲ್ಲೋ ದೂರ
ಕಾಡಲ್ಲಿ ಮೆತ್ತಗೆ ಮಲಗಿರಬೇಕು
ತರಗೆಲೆಗಳಡಿಯಲ್ಲಿ.salugalalli nijakku arthavide. Yavude avaghada kanade kevala parisarada prani pakshigala jothe ee ನಿಜದ ನಾಲಗೆ thuntata aduthirabahudu..Aa rasthe hithavagi badukuvudaralli samshayavilla..........ninna parisara premakke nannadondu kanike ee Comment!!!!!!

Parisarapremi ಹೇಳಿದರು...

aahhh.. BSA??

Parisarapremi ಹೇಳಿದರು...

ಅಂದ ಹಾಗೆ ಮೇಲಿರೋ "parisara premi" ಯಾರೆಂದು ತಿಳಿಯಲಿಲ್ಲ. Confuse ಆಯ್ತು, ನಾನೇ ಕಮೆಂಟಿಸಿದ್ದೆನಾ ಅಂತ.. ಪರಿಚಯ ಮಾಡಿಕೊಳ್ಳಬಯಸುತ್ತೇನೆ.. :-)

ಶ್ರೀನಿಧಿ.ಡಿ.ಎಸ್ ಹೇಳಿದರು...

ಅನಾನಿಮಸ್,

ನಿಮ್ಮ ಕಮೆಂಟಿಗೆ ಧನ್ಯವಾದಗಳು.


ಪರಿಸರ ಪ್ರೇಮಿಗಳೇ,
ನಿಮ್ಮ ಕಮೆಂಟೋದಿ ಖುಷಿಯಾಯಿತು. ನಾನು ಕೂಡ ನಿಮ್ಮ ಹಾಗೇ ಪರಿಸರ ಪ್ರೇಮೀನೇ. ಆದರೆ ಈ ಕವನ ಪರಿಸರಕ್ಕೆ ನೇರವಾಗಿ ಸಂಬಂಧಿಸಿದ್ದೇನೂ ಅಲ್ಲ..

ಅರುಣ್ ಪರಿಸರಪ್ರೇಮಿ!
ಹುಂ ಕಣ್ರೀ, BSA ನೇ:) ನಿಮ್ ಹಾಗೇ ನಂಗೂ ಸಮಸ್ಯೆ ಆಗಿತ್ತು, ಇದೇನು ಅರುಣ್ ಇಷ್ಟ್ ಹೊತ್ತಲ್ಲಿ ಕಮೆಂಟ್ ಬರ್ದಿದಾರಲ್ಲ ಅಂತ. ಈಗ ಸಮಸ್ಯೆ ಪರಿಹಾರ ಆಯ್ತು!ಇನ್ನು ಅವರುಂಟು, ನೀವುಂಟು!:)

ಅನಾಮಧೇಯ ಹೇಳಿದರು...

Kavanada ella bagavannu nodidre parisarada kurithu kalaji kanisuthideye horathu "nanaganthu" berenoo kanisalilla, adakkagi hage barede.....(ಪರಿಸರ ಪ್ರೇಮಿಗಳೇ,
ನಿಮ್ಮ ಕಮೆಂಟೋದಿ ಖುಷಿಯಾಯಿತು. ನಾನು ಕೂಡ ನಿಮ್ಮ ಹಾಗೇ ಪರಿಸರ ಪ್ರೇಮೀನೇ. ಆದರೆ ಈ ಕವನ ಪರಿಸರಕ್ಕೆ ನೇರವಾಗಿ ಸಂಬಂಧಿಸಿದ್ದೇನೂ ಅಲ್ಲ..)hage vimarshe maduvavaru ondondu reethiyalli maduthareye horathu ellaru onde samanagi coment bareyodilla antha thilisalu santhoshapaduthene...Nimma feedbackigu Danyavada (ನೇರವಾಗಿ allade iddaru parokshavagi parisarada paravagiye ide...)

Parisarapremi ಹೇಳಿದರು...

ಒಳ್ಳೇ ಪರಿಸರಪ್ರೇಮ!!

Anveshi ಹೇಳಿದರು...

ನಿಮಗೆ ಗೊತ್ತಿಲ್ಲಾಂತ ಕಾಣ್ಸುತ್ತೆ...

ನಮ್ಮೂರ ರಸ್ತೆಗಳೆಂದರೆ...
ರಾಜಕಾರಣಿಗಳು, ಅಧಿಕಾರಿಗಳ ನಾಲಿಗೆ ರುಚಿಗಾಗಿ ರಚನೆಯಾಗಿರುವ ದೊಡ್ಡ ದೊಡ್ಡ ಹೊಂಡಗಳು!!!

ಸಿಂಧು sindhu ಹೇಳಿದರು...

ಶ್ರೀನಿಧಿ,
ಹೊಸರಸ್ತೆ ಹೊಸನೋಟ..
ಚೆನ್ನಾಗಿದೆ, ಏರುತಗ್ಗಿನ ಹಾದಿಯಲ್ಲಿ ನಿನ್ನದೊಂದು ರಾಜಮಾರ್ಗ.. ಅಲ್ಲಿಂದ ಎಷ್ಟೊಂದು ರಸ್ತೆಗಳಿಗೆ ಸಂಪರ್ಕ..

ನನ್ನ ನಿನ್ನ ಭಾವಬಿಂದುಗಳ ಮಧ್ಯೆ ಹರಿವ ಲಹರಿ, ಸ್ನೇಹದ ದೋಣಿ..

ಅನಾಮಧೇಯ ಹೇಳಿದರು...

shree,

ninge ondu swalpa adru nachke agavu.. malege hedri manele kootidre, yava khushi sigta maaraya...

http://nenapu-nevarike.blogspot.com/2007/07/blog-post_06.html


Cheers
Chin

ಅನಾಮಧೇಯ ಹೇಳಿದರು...

hello parisara premigale ಒಳ್ಳೇ ಪರಿಸರಪ್ರೇಮ!! antha "!!" chinhegalanna yake hakiddiri antha kelbahuda?? nimage matra parisarada bagge preethi antha thilkobedi, anthavaru halavaru mandi deshadalli, prapanchadalli iddare....dayavittu prathiyondu chinhegalige arthaviruthe annudanna innadaru thilidukolluvirendu bavisuthene...

Mahantesh ಹೇಳಿದರು...

ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು
........................
ಮರಗಳಿಂದುದುರಿದ ಹೂವಿಂದ ಮುಚ್ಚಿದ ರಸ್ತೆ,
ಈಗ ತಾನೆ ನಡೆಯಲು ಕಲಿತು ಹೆಜ್ಜೆಯಿಡೋ ಪುಟ್ಟ ಪಾದ

tumba hiDisida sAlugaLu

PRAVINA KUMAR.S ಹೇಳಿದರು...

ನಾನು ತುಂಬಾ ದಿನಗಳಿಂದ ನಿಮ್ಮ ಬ್ಲಾಗನ್ನು ನೋಡುತಿದ್ದೇನೆ. ಇದೊಂದು ಉತ್ತಮ ಬ್ಲಾಗ್.

ಅನಾಮಧೇಯ ಹೇಳಿದರು...

ಶ್ರೀ,
ಚನ್ನಾಗಿದೆ ನಿನ್ನ ಕಲ್ಪನೆ. ಅದ್ಭುತ. ಒಂದು ಸಾರಿ ಓದಿ ಅರ್ಥ ಮಾಡಿಕೊಳ್ಳಲು ಕಷ್ಟ ಆಯಿತು ಎರೆಡು ಸಾರಿ ಓದಿ ಅರ್ಥ ಮಾಡಿಕೊಂಡೆ. ರಸ್ತೆಯನ್ನು ನಾಲಿಗೆಗೆ ಹೋಲಿಸಿದ್ದು ಮಾತ್ರ ತೀರ ಅಪರೂಪದ ಹೋಲಿಕೆ ಆಹಾ ಎಂಥಾ ಕಲ್ಪನೆ.