ಭಾನುವಾರ, ಮೇ 01, 2011

ಜೀವಯಾನವೆಂದರೆ..

ಕಾಲು ಕಾಯುವ ಪಾದರಕ್ಷೆ
ತಿಳಿಸುತ್ತದೆ ನಡೆದು
ಬಂದ ದಾರಿ
ಬೇಡದ ಭೂತಕ್ಕೆ ಹೇಳಿ ವಿದಾಯ
ಓಡಿದರೆ ಕಾಣುವುದು
ವಿಸ್ತಾರ ಹೆದ್ದಾರಿ

ಜೀವನ ಮಿಠಾಯಿ ಡಬ್ಬ
ಸಿಕ್ಕೀತು ಒಂದಲ್ಲ ಒಂದು
ಸಿಹಿ,
ತೆರೆದರೆ ಮುಚ್ಚಳ

ಸುಮ್ಮನೆ ಸಂತೈಸಿದರೆ ಸಿಗುವ
ಶಾಂತಿಗೆ
ಉದ್ದೇಶವಿಲ್ಲದ ಸಹಾಯಕ್ಕೆ
ಸಿಡುಕಿನ ಮುಖಕ್ಕೆ ದೊರಕುವ
ಕಿರುನಗೆಯ ಉತ್ತರಕ್ಕೆ
ಇಲ್ಲ ಯಾವ ನಿಘಂಟಿನಲ್ಲೂ ಅರ್ಥ

ಕಲಿತುಕೊಳ್ಳುತ್ತ ಹೋದರೆ
ಒಂದರ ನಂತರ
ಮತ್ತೊಂದ
ಕಾಣುವುದು ಹೊಳೆವ ತಾರೆಗಳ
ಹೊಸ ಆಕಾಶ

ಜೀವಯಾನ, ಎಲ್ಲ ಸಿದ್ಧತೆಗಳ
ನಂತರದ ಪಯಣ
ಅಥವ, ಸುಮ್ಮಗೆ
ಬೀಸಿದ ಗಾಳಿಗೆ ಹಾರಿದ ಪುಕ್ಕ

ಕೊನೆಗುಳಿಯುವುದು ಮಾತ್ರ
ದಕ್ಕಿದ
ನೆಮ್ಮದಿಗಳ ಲೆಕ್ಕ

4 ಕಾಮೆಂಟ್‌ಗಳು:

sunaath ಹೇಳಿದರು...

ಸುಂದರವಾದ ಹಾಗು ಅರ್ಥಗರ್ಭಿತವಾದ ಹನಿಗಳು.

sneha rajaram ಹೇಳಿದರು...

True picture of life. We should be always thankful to people who cared for us. Thank you for the beautiful poem.

ಸಿಂಧು sindhu ಹೇಳಿದರು...

ನಿಧಿ,

ಎಲ್ಲ ಸಿದ್ಧತೆಗಳ ಅನಂತರದ ಪಯಣ!

ಕಾದಿರಿಸದ ಟಿಕೆಟ್ ಮತ್ತು ನಿಲುಗಡೆಯ ಮಜಾ ಸಿಗುವುದು ಮದುವೆಗೆ ಮುಂಚೆ ಮಾತ್ರ ಅಲ್ದ. :)
ಅಥವಾ to be specific ಮಗುವಾಗುವುದಕ್ಕೆ ಮುಂಚೆ.

fun apart,
ಕವಿತೆ ಇಷ್ಟ ಆತು. ಯಾವ ಲೆಕ್ಕ ಉಳಿಸಿಕೊಳ್ತ್ಯ ಅನ್ನೋದು ವೈಯಕ್ತಿಕ ಆಯ್ಕೆ.

ಪ್ರೀತಿಯಿಂದ,ಸಿಂಧು.

Anuradha ಹೇಳಿದರು...

ಜೀವಯಾನವೆಂದರೆ ನೆಮ್ಮದಿಯ ಲೆಕ್ಕ ...ಅಧ್ಭುತ ! ಅಭಿನಂದನೆಗಳು .