ಹೊಲಿದ ಬಾಯಿಯ ತೆರೆಸುವುದು
ಕಷ್ಟ, ಯಾವ ಬಾಗಿಲು
ತೆರೆಯೇ
ಸೇಸಮ್ಮಗಳೂ ಮಾಡುವುದಿಲ್ಲ ಚಮತ್ಕಾರ
ಚಂದಮಾಮ ಗುಬ್ಬಿ ಚಿಟ್ಟೆ ನವಿಲುಗಳಿಗೂ
ಇಲ್ಲ ಪುರಸ್ಕಾರ
ಬೇಡವೆಂದ ಮೇಲೆ ಬೇಡ ಅಷ್ಟೇ.
ಬಿಗಿದ ಬಾಯಿಯೊಳಗಿಂದ
ಕೆಳಗಿಳಿದಿಲ್ಲ ಹಳೆಯ ತುತ್ತು
ಕಥೆಗಳೆಲ್ಲ ಖರ್ಚಾಗಿ
ಓಲೈಸುವಿಕೆ ಮುಗಿದು
ಧ್ವನಿ ಏರಿದರೂ
ಕಣ್ಣು ಕೆಂಪಾದರೂ
ಜಗ್ಗದ ದಿಗ್ಗಜೆ.
ದ್ರಾವಿಡ ಪ್ರಾಣಾಯಾಮಗಳು
ಮುಗಿದು ಮಗಳು
ಇನ್ನು ಉಣ್ಣುವುದಿಲ್ಲ
ಎಂದು ಖಾತರಿಯಾದ ಮೇಲೆ
ಬಟ್ಟಲು ನೋಡಿಕೊಂಡು ಸುಳ್ಳು
ಸಮಾಧಾನ, ಅಮ್ಮನಿಗೆ
ನಿನ್ನೆಗಿಂತ ಕೊಂಚೆ ಹೆಚ್ಚೇ ಉಂಡಿದ್ದಾಳೆ
ಸಂಜೆ ಹೊಟ್ಟೆಗೆ ಬೇರೇನೋ ಹೋಗಿದೆ
ಕೊನೆಗೊಮ್ಮೆ ಏಳುವ ಮುನ್ನ
ಇನ್ನೊಂದು ವಿಫಲ ಪ್ರಯತ್ನ
ಯಾವ ಪಾಸ್ ವರ್ಡು ಹಾಕಿದರೂ
ಓಪನಾಗದ ಲಾಕು,
ಎಲ್ಲ ಅನುನಯದ ಕೀಗಳನೂ ಬಿಸಾಕು
ಸಿಂಕಿನಲಿ ಕುಕ್ಕಿದ ತಟ್ಟೆಯ ಸದ್ದು
ಕೇಳಿದೊಡನೆಯ, ಬಾಯ್ದೆರೆದು
ನಕ್ಕು ತಟ್ಟಿದ ಚಪ್ಪಾಳೆಗೆ
ಬ್ರಹ್ಮಾಂಡ ದರ್ಶನ.
7 ಕಾಮೆಂಟ್ಗಳು:
ಮುದ್ದಾದ ಕವನ
ನಿಧೀ,
"ಕುಕ್ಕಿದ ತಟ್ಟೆಯ ಸದ್ದು
ಕೇಳಿದೊಡನೆಯ, ಬಾಯ್ದೆರೆದು
ನಕ್ಕು ತಟ್ಟಿದ ಚಪ್ಪಾಳೆಗೆ"
ಈ ಸಾಲಿಗೆ ಮರುಳಾಗಿಹೋದೆ. ಇಡೀ ಕವಿತೆಗೆ ಫಿದಾ ಕೂಡ.
ಇದು ಬರಿಯ ಮೂಕಿ ವೈಭವ ಆಯಿತು.
ವಾಕಿಯ ಜಗತ್ತೂ ಇನ್ನೂ ಹೈ ಮಾಡುತ್ತದೆ.
ಮಾತು ಬಂದ ಮೇಲೆ ಅವಳು ಕಲಿಸುವ ಪಾಠಗಳಿಗೆ ತಲೆತಿರುಗುವ ಮತ್ತಲ್ಲಿ ನೀನಿನ್ನೇನು ಬರೀತೀಯ ಅಂತ ಯೋಚಿಸುತ್ತಿದ್ದೇನೆ.
ಅಮ್ಮನಿಗೆ, ಮಗಳಿಗೆ, ಮತ್ತು ಇಬ್ಬರನ್ನೂ ಪದಗಳಲ್ಲಿ, ಚಿತ್ರಗಳಲ್ಲಿ ಪೋಣಿಸುತ್ತಿರುವ ಅಪ್ಪನಿಗೆ ಹಗ್ಸ್.
ಪ್ರೀತಿಯಿಂದ,
ಸಿಂಧು
Super poem! liked it very much.
nice !!
ಅಯ್ಯೋ! ಸಖತ್ ಮುದ್ದಾಗಿದೆ ಕವನ . ಉಣಬಡಿಸುವ ಕೂಸಿನಷ್ಟೆ ಚಂದ :)
ತುಂಬಾ ಚನ್ನಾಗಿದೆ
ತುಂಬಾ ಚನ್ನಾಗಿದೆ
ಕಾಮೆಂಟ್ ಪೋಸ್ಟ್ ಮಾಡಿ