ಸೋಮವಾರ, ನವೆಂಬರ್ 20, 2006

ಬೆಳಗೊಂದು ಕೊಲಾಜ್.

ನಿತ್ಯದ ಬೆಳಗೂ ಹೀಗೆಯೇ,
ಒಂದು ಕೋಲಾಜ್
ಕಲಾಕೃತಿಯಂತೆ.
ಏಳುತ್ತಿದ್ದ ಹಾಗೇ,
ಎದುರುಮನೆಯ ಅವರೇಕಾಳು
ಉಪ್ಪಿಟ್ಟಿನ ಪರಿಮಳ.
ಪಕ್ಕದ ಭಟ್ಟರ ಮನೆಯಲ್ಲಿ
ಕೌಸಲ್ಯಾ ಸುಪ್ರಜಾ..
ಹೊರಗಡೆ ಬೀದಿಯಲ್ಲಿ
ಶಾಲೆಯ ವ್ಯಾನಿನ ಹಾರ್ನು
ಮಾಲಿಕನ ಮಗನಿನ್ನು ಹೊರಟಿಲ್ಲ,
ಕೇಳುತಿದೆ ಅವನಮ್ಮನ ಬೈಗುಳ.

ಹಾದಿಯಲ್ಲಿ ಸೇವಂತಿಗೆ ಮಾರುವ
ಗಾಡಿಯಾತನ ಕೂಗು,
ಕೂಗೇ ಅದು, ಅಲ್ಲ ವಿನಂತಿಯೆ?
ಸ್ನಾನದ ಮನೆಯೊಳಗಿಂದ
ಮಿತ್ರನ ಏರು ದನಿ
ಟವಲು ಕೊಡೋ , ಮರೆತೆ.
ಮರೆತದ್ದೆ?, ಇರಬಹುದು.
ಎಲ್ಲಿಂದಲೋ ಬರುವ
ಊದುಬತ್ತಿಯ ಘಮಲು,
ಮನೆಯ ತಾರಸಿ ಮೇಲೆ ದಿನವು
ಮಗ್ಗಿಯೋದುವ ಹುಡುಗಿ
ಆಕೆಗದು ಬಲು ಕಷ್ಟ,
ಈಗೀಗ ನನಗೂ!

ಹೊರಡಬೇಕೀಗ ಆಫೀಸಿಗೆ,
ಶಬ್ದಗಳ ದಾರಿಯಲಿ,
ವಾಸನೆಯ ಜೊತೆಗೆ.
ನಿತ್ಯದ ಬೆಳಗೂ ಹೀಗೆಯೇ..
ಒಂದು ಕೋಲಾಜ್
ಕಲಾಕೃತಿಯಂತೆ.
ಎಲ್ಲಿಂದಲೋ ತೆಗೆದು
ಎತ್ತಲೋ ಜೋಡಿಸಿ,
ಮೂಡಿಸಿಬೇಕು ಹೊಸ ಚಿತ್ತಾರ.
ಪರದೆ ಸರಿದಾಗ
ನಿಂತಿರಬೇಕು ನಾವು,
ನಮ್ಮದೆ ಕಲಾಕೃತಿಯ ಜೊತೆಗೆ,
ನಮ್ಮೆದುರಿಗೇ!.

10 ಕಾಮೆಂಟ್‌ಗಳು:

Susheel Sandeep ಹೇಳಿದರು...

wAh!
Saili tuMbAne hiDisitu..itta gadyavoo allada atta padyavoo allada naDuve niMta geeTinaMte!
nAnoo heccu kaDime heegE geecuvudu kavanagaLanna :)

Susheel Sandeep ಹೇಳಿದರು...

simple but very effective

Sushrutha Dodderi ಹೇಳಿದರು...

ಹೇ ಸೂಪ್ಪರ್ರ್ ಮಗ! ಆದ್ರೆ ನಮ್ಮನೆ ಹತ್ರ ಬೆಳಗಿನ ದೃಶ್ಯಗಳೇ ಬೇರೆ ಥರ ಇರ್ತು... ನಮ್ ಏರಿಯಾದ ದೃಶ್ಯಗಳನ್ನು ಕಟ್ ಮಾಡಿ ಕೋಲಾಜ್ ತಯಾರಿಸಿದ್ರೆ ಇದರಕ್ಕಿಂತ ತುಂಬಾ ಬೇರೇನೆ ತರಹದ ಚಿತ್ರ ಸೃಷ್ಟಿಯಾಗ್ತು.. ನಿಮ್ ಏರಿಯಾನೇ ಬೆಸ್ಟು ಗುರು..! ಏನೋ ಬದುಕು ಸುಂದರವಾಗಿದೆ ಅಂದ್ಕೊಂಡು...... ಬದುಕೋದು..!

ಶ್ರೀನಿಧಿ.ಡಿ.ಎಸ್ ಹೇಳಿದರು...

@ ಸುಸಂಸ್ಕೃತ:
ಈ ತರಹ ಬರೆಯುವ ಪ್ರಯತ್ನ ನಾನು ಮಾಡುವುದು ಕಡಿಮೆ. ಒಂದು ಛಂದಸ್ಸಿನೊಳಗೇ ಬರೆಯುವವ. ಇವತ್ತೇಕೋ ಈ ಪ್ರಯೋಗ ಮಾಡೋಣ ಅನ್ನಿಸಿತು. ನಿಮ್ಮ ನುಡಿಗಳಿಗೆ ಕೃತಜ್ಞ.

@ಸುಶ್,
ಹೇಳೀ ಕೇಳೀ ಬೆಂಗ್ಳೂರು, ಒಂದೊಂದ್ ಏರಿಯಾ ಒಂದೊಂದ್ ಥರ ಇರದೇಯ ತಗ.. ನಿನ್ ಏರಿಯಾದ ಕೋಲಾಜ್ ಇದ್ಕಿಂತಾ ಚೊಲೋನೇ ಆಗ್ತಿಕ್ಕು ನೋಡು!
ಬದುಕು ಯಾವತ್ತೂ ಸುಂದರನೇ ಇರ್ತು.... , ಅಲ್ದನಾ?:)

Vedavyasa ಹೇಳಿದರು...

Nice 1

Unknown ಹೇಳಿದರು...

chennagide

Shiv ಹೇಳಿದರು...

ಶ್ರೀನಿಧಿ,

ಹಂಗೆ ಬ್ಲಾಗ್ ಲೋಕದಲ್ಲಿ ತಿರುಗಾಡುವಾಗ ನಿಮ್ಮ ಬ್ಲಾಗ್ ಸಿಗ್ತು..

ಕೊಲಾಜ್ ಸುಂದರವಾಗಿ ಮೂಡಿ ಬಂದಿದೆ.

ನಿಮ್ಮ ತುಂತುರು ಹನಿಗಳು ಸಹ ಇಂತಹ ಅನೇಕ ಕೊಲಾಜ್‍ಗಳನ್ನು ನೀಡ್ತಾ ಇರಲಿ..

ಮನಸ್ವಿನಿ ಹೇಳಿದರು...

ಸರಳವಾದ ಸುಂದರ ಕವನ

ಶ್ರೀನಿಧಿ.ಡಿ.ಎಸ್ ಹೇಳಿದರು...

ವ್ಯಾಸ,ಜಿತೇಂದ್ರ ಕುಂದೇಶ್ವರ, ಶಿವ್, ಮನಸ್ವಿನಿ ಎಲ್ಲರಿಗೂ ವಂದನೆಗಳು..............

ಅನಾಮಧೇಯ ಹೇಳಿದರು...

cool man... inthadu tumba hidsutte ...yakandre yellarigu hattiravagirutte...haganta hege bariri antalla..nimage lahari bandahage moodi barali...