ಬುಧವಾರ, ಜನವರಿ 03, 2007

ಒಂದು ಬೆಳಗಿನ ಸಮಯ...

ಒದ್ದೆ ಕೂದಲನೊರೆಸಿ, ಬಳೆಯ ದನಿಯಾ ಜೊತೆಗೆ
ನಡೆದು ಬಂದಳು ಆಕೆ, ತುಳಸಿ ಗಿಡದೆಡೆಗೆ..

ಹೆಬ್ಬಾಗಿಲಿನ ಹೊರಗೆ, ಹಿತದ ಎಳೆ ಬಿಸಿಲು
ಮೊದಲೆ ಬಂಗಾರವೀಕೆ, ಈಗ ಮತ್ತೂ ಚಂದ..

ಗೆಜ್ಜೆ ಘಲ್ಲೆನಿಸುತಲಿ, ತುಳಸಿಗೆ ಪ್ರದಕ್ಷಿಣೆಯು
ಧೂಪದಾ ಘಮವಿಹುದು ಅಂಗಳದ ತುಂಬಾ

ಆತ ಮಲಗಿಹನಲ್ಲಿ ಒಳಮನೆಯ ಕತ್ತಲಲಿ
ಕಳೆದ ರಾತ್ರಿಯ ಸುಖದ ಕನಸಿನೊಳಗೆ..

ಬಿಳುಪು ಪಾದಗಳನ್ನ, ಮೆಲುವಾಗಿ ನಡೆಸುತ್ತ
ಮೆಲ್ಲನುಸುರಿದಳಾಕೆ, ಕೋಣೆ ಪರದೆಯ ಸರಿಸಿ,

ಮುಂಜಾವು ಬಂದಿಹುದು ಮನೆಯ ಬಾಗಿಲ ಬಳಿಗೆ
ಏಳಬಾರದೆ ದೊರೆಯೆ, ಹೊತ್ತು ಮೀರುತಿದೆ.

ಆಕೆಯಿನಿ ದನಿಯು, ಅವನ ಕಿವಿಯನು ಸವರಿ
ಮೆಲ್ಲನೆದ್ದನು ಅವಳ ಸೊಬಗ ನೋಡುತಲಿ

ಬಳಿ ಬಾರೆ ಎಂದವಳ ಪ್ರೇಮದಲಿ ಕರೆದವನು
ಬಾಚಿ ತಬ್ಬಿದನವಳ, ಕದವ ಮುಚ್ಚುತ್ತ..

ಬಾಗಿಲಿನ ಸಂದಿಯಲಿ ಬಿಸಿಲಕೋಲೊಂದಿತ್ತು
ಕದ್ದು ನೋಡುತಲವರ ಸರಸವನ್ನು.

10 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಹಿಹ್ಹಿಹ್ಹಿ! ಸುಪ್ಪರ್ ಅಂದ್ರೆ ಸುಪ್ಪರ್ ಮಗಾ..! ಶೈಲಿಯಿಂದ ಹಿಡಿದು ಬಿಸಿಲ ಕೋಲಿನ ತನಕ ..........ಆಹ! ಚನಾಗಿದ್ದು...

ಅನಾಮಧೇಯ ಹೇಳಿದರು...

really super. ಇದನ್ನ ಓದುತ್ತಾ ಹೋದ್ರೆ ಆ ದೃಶ್ಯವೇ ಕಣ್ಣು ಮುಂದೆ ಬಂದ ಹಾಗೆ ಆಗ್ತು. ವಿಷ್ಯ ಸಾಮಾನ್ಯದ್ದಾದ್ರೂ ಅದನ್ನ ನಿರೂಪಿಸಿರುವ ಶೈಲಿ ಸೂಪರ್.

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶ್, ವಿಕಾಸ,
ವಿಷ್ಯ ಅಂದ್ರೆ ಇವತ್ ಬೆಳಗ್ಗೆ ಗೆಳತಿ ಒಬ್ಬಳ ಹತ್ರ ಚಾಟಿಸುತ್ತಿದ್ದಾಗ ಅವಳು ಸುಮ್ಮನೆ ಒಂದೆರಡು ಶಬ್ದ ಕೊಟ್ಲು, ಅದ್ನೇ ಹಿಡ್ಕೊಂಡು ಲಂಬಿಸಿದ್ದು ಇದು! ಆ ಹೆಸರು ಹೇಳಲು ಬಯಸದ ಗೆಳತಿಗೆ ಧನ್ಯವಾದ! :)

ಮನಸ್ವಿನಿ ಹೇಳಿದರು...

"ಹೆಬ್ಬಾಗಿಲಿನ ಹೊರಗೆ, ಹಿತದ ಎಳೆ ಬಿಸಿಲು
ಮೊದಲೆ ಬಂಗಾರವೀಕೆ, ಈಗ ಮತ್ತೂ ಚಂದ.. "

ಚಂದದ ಸಾಲುಗಳು...ಹಾಡು ತುಂಬಾ ಚೆನ್ನಾಗಿದೆ.

ಅನಾಮಧೇಯ ಹೇಳಿದರು...

Super shrini boy :)

Another k s narasimhaswamy in the making :)

Englishnalli baradiddakke kshame irali...

Chinnu..

ಶ್ರೀನಿಧಿ.ಡಿ.ಎಸ್ ಹೇಳಿದರು...

ಮನಸ್ವಿನಿ,
ಧನ್ಯವಾದ!
ಚಿನ್ಮಯಾ,
ಅಷ್ಟೆಲ್ಲಾ ಹೊಗಳಬೇಡಪ್ಪಾ ದೊರೇ! ಹೆದರಿಕೆ ಆಗತ್ತೆ!!

ಯುವಪ್ರೇಮಿ ಹೇಳಿದರು...

ಬಹಳ ಚನ್ನಾಗಿದೆ...!!

ಪ್ರೇಮ ಸಲ್ಲಾಪದ ದೃಶ್ಯವೆ ನಮ್ಮ ಕಂಣ್ಮುಂದೆ ನಡೆದಂತಿದೆ...
ಇಂತಹ ಒಂದು ಸುಂದರ ಕವನಕ್ಕೆ ವಂದನೆಗಳು..

-ಯುವಪ್ರೇಮಿ

ಅನಾಮಧೇಯ ಹೇಳಿದರು...

ಅಮ್ಮ.........
ಹೇ ತು೦ಬಾ ಚೆನ್ನಗಿದೆ
ಇದನ್ನು ನೊಡ್ತ.. ನನಗೆ ಒ೦ದು ಸಲಿ ಎಲ್ಲಾ ಕಣ್ಣುಮು೦ದೆ
ಬ೦ದ೦ಗಾಯಿತು
lord Byron neenu...

ಅನಾಮಧೇಯ ಹೇಳಿದರು...

ಅಮ್ಮ.........
ಹೇ ತು೦ಬಾ ಚೆನ್ನಗಿದೆ
ಇದನ್ನು ನೊಡ್ತ.. ನನಗೆ ಒ೦ದು ಸಲಿ ಎಲ್ಲಾ ಕಣ್ಣುಮು೦ದೆ
ಬ೦ದ೦ಗಾಯಿತು
lord Byron neenu...

Lanabhat ಹೇಳಿದರು...

So Romantic........