ಬುಧವಾರ, ಜೂನ್ 27, 2007

ಎರಡು ಚಿಟುಕು ಚುಟುಕಗಳು.

ಮಳೆ.
ಕಪ್ಪು ಆಗಸದಾಚೆ ಅರ್ಧ ಬೆಳಕಿನ ಚಿತ್ರ
ಕಂಡು ಕಾಣದ ಹಾಗೆ ಬೆಳ್ಳಕ್ಕಿ ಸಾಲು
ಮೋಡಗಳ ಮುಖದಲ್ಲಿ ಯಾರವೋ ಕಣ್ಣು
ಅರಳು ಕಣ್ಣುಗಳಿಂದ ಇಳಿವ ಜಲಧಾರೆ.

ಮಾತು - ಮೌನ
ಮೌನದಲೆ ಹಿತವಿತ್ತು , ಮಾತ ಕಲಿಸಿದನವನು
ಮಾತನಾಡಲು ಕಲಿತೆ, ಮೌನ ಮರೆತಿತ್ತು
ಅವನ ಮಾತನ್ನೆಲ್ಲ ನನಗೆ ಕೊಟ್ಟನೋ ಏನೋ,
ಅವನ ಮಾತುಗಳಲ್ಲಿ ಮೌನವಿಣುಕಿತ್ತು.

ಅವನ ಮೌನಕೆ ನನ್ನ ಮಾತ ನೀಡುವ ಆಸೆ
ಕೇಳಿದರೆ ಬೇಡೆನುವ, ಮೌನದಲ್ಲೇ.
ನನಗು ಅದು ಸಮ್ಮತವೇ, ಇರಲಿ ಬಿಡು ಮಾತಿಲ್ಲೇ,
ನಾ ಬೆಳ್ಳಿಯಾದರೋ, ಅವನು ಬಂಗಾರ!.

ನನ್ನ ಕವನಗಳಲ್ಲ. ಬರೆದವರಿಗೆ ಹೆಸರು ಹೇಳಿಕೊಳ್ಳುವುದು ಬೇಕಿಲ್ಲವಂತೆ.

4 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

ಶ್ರೀನಿಧಿ

ಇಷ್ಟು ಚಂದ ಕವಿತೆ ಕೊಟ್ಟಿದ್ದಕ್ಕೆ ಅವಳಿಗೆ ಮಳೆ ಮುತ್ತು, ಮೌನದ ಅಪ್ಪುಗೆ ನನ್ ಕಡೆಯಿಂದ.

ನಿನಗೆ - ಮಳೆ ಮುತ್ತಿನ ಸರ, ಮೌನದ ಕರಡಿಯಪ್ಪುಗೆ (ತುಂಬ ಹೊತ್ತು)

ಸಿಕ್ಕಾಪಟ್ಟೆ ಖುಶಿಯಾಯ್ತು. ಥ್ಯಾಂಕ್ಸ್

Sushrutha Dodderi ಹೇಳಿದರು...

ಆಹ ಆಹ ಆಹ!
ಬಂಗಾರದಂಗಿದೆ ಗುಲಗುಂಜಿ ಚುಟುಕುಗಳು...
ಅಕ್ಕನ ಕಮೆಂಟಂತೂ ಬಂಗಾರದ ಮೇಲಿಟ್ಟ ಕೆಂಪು ಹವಳದಂತಿದೆ..
ಲವ್ಯೂ ಶ್ರೀನಿಧಿ.. :)
ಇಷ್ಟೆಲ್ಲಾ ಚನಾಗ್ ಬರೆದವ್ರಿಗೆ ನನ್ನ ಅಭಿನಂದನೆ ತಿಳ್ಸು..

ಶ್ಯಾಮಾ ಹೇಳಿದರು...

thumba chandada saalugalu.... nange ishta aathu thumba...

ಅನಾಮಧೇಯ ಹೇಳಿದರು...

ಶ್ರೀ,
ಇಂಥಹ ಸಾಲುಗಳನ್ನು ನಮಗೆ ತುಂತುರು ಹನಿಗಳಲ್ಲಿ ಬಾಯರಿಕೆ ನಿಗಿಸಿದ್ದಕ್ಕೆ ಧನ್ಯವಾದಗಳು.

ಹೇ ಅವರಿಗೆ ಹೇಳೋ ಒಂದು ಬ್ಲಾಗ್ ತೆಗೆದು ಇದನ್ನೆಲ್ಲಾ ಬರಿಯಕೆ. ನಮ್ಮ ಸಾಹಿತ್ಯ ಲೋಕ ಶ್ರೀಮಂತ ಮಾಡೋಕೆ.