ಶುಕ್ರವಾರ, ನವೆಂಬರ್ 28, 2008

ಕಾಯ್ಕಿಣಿ ಹೇಳಿದ ಕಥೆಗಳು..


ಎಂದಿನಂತೆ ಈ ಬಾರಿಯೂ ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿದ್ದೇನೆ. ನಾನೋದಿದ ಸಂಸ್ಥೆ ಅನ್ನುವ ಕಾರಣವೋ, ಅಥವ ನುಡಿಸಿರಿಯ ಜಾದುವೇ ಅಂತದ್ದೋ, ಇಲ್ಲಿಗೆ ಬಂದೇ ಬರುತ್ತೇನೆ- ಪ್ರತಿ ನುಡಿಸಿರಿಗೂ. ಈ ಬಾರಿ ವಿದ್ಯಾಗಿರಿಯ ನುಡಿಸಿರಿಗೆ ಜುಮುರು ಮಳೆ ಕೂಡ ಸಾಥ್ ನೀಡಿದೆ. ಆ ಮಳೆಯ ಮಧ್ಯೆಯೇ, ಈ ಸಂಜೆ ಕಾಯ್ಕಿಣಿ ಚಂದ ಮಾತನಾಡಿದರು.

ಅದಕ್ಕೊಂದು ಒಂದು ವರದಿಯ ಥರದ ಬರಹ:


ಆಳ್ವಾಸ್ ನುಡಿಸಿರಿಯ ರತ್ನಾಕರ ವರ್ಣಿ ವೇದಿಕೆಯೆದುರಿನ ಜನ ಜಯಂತ ಕಾಯ್ಕಿಣಿಯವರ ಮಾತುಗಳಿಗೆ ಸಂಜೆ ಮಳೆಯ ಮಧ್ಯೆ ಮರುಳಾದರು. ಕಥಾ ಸಮಯ ಅನ್ನುವ ವಿಭಾಗದಡಿ ಕಾಯ್ಕಿಣಿ ಮಾತನಾಡಿದರು. ಕಥೆ ಎಂದರೇನು, ಕಥೆ ಬರೆಯೋದು ಸುಲಭಾನಾ ಅಂತೆಲ್ಲ ಮಾತನಾಡುತ್ತ ಜಯಂತರು ಮೂರು ಘಟನೆಗಳನ್ನು ನಮ್ಮ ಮುಂದಿಟ್ಟರು.


ಮರುಳ ಅನ್ನುವವನೊಬ್ಬ ಗೋಕರ್ಣದಲ್ಲಿದ್ದ. ಪ್ರತಿ ದಿನ ಬೆಳಗ್ಗೆ ಬೇಗ ಎದ್ದವನೇ, ಪೂರ್ವ ದಿಕ್ಕಿಗೆ ಮುಖ ಮಾಡಿ, "ಬಾರೋ, ಬಾರೋ" ಅಂತ ಕಿರುಚುತ್ತಿದ್ದ. ಅವನ ಕಿರುಚುವಿಕೆ ಕಡಿಮೆಯಾಗುತ್ತಿದ್ದುದ್ದು ಸೂರ್ಯ ಮೂಡಿದ ಮೇಲೆಯೇ. ಅಂತೆಯೇ, ಸಂಜೆಯಾಗುತ್ತಿದ್ದ ಹಾಗೆ ಸಮುದ್ರ ತಟಕ್ಕೆ ತೆರಳಿ, "ಹೋಗೋ ಹೋಗೋ ಕತ್ತೆ, ಹಂದಿ" ಅಂತೆಲ್ಲ ಸೂರ್ಯನನ್ನು ನೋಡಿ ಬೈಯುತ್ತಿದ್ದ. ಸೂರ್ಯ ತೆರಳಿದ ಘಳಿಗೆ ಏನೋ ಸಾಧಿಸಿದ ನೆಮ್ಮದಿ.

ಒಂದು ದಿನ ನಾನು ಮನೆಗೆ ಹೋಗುತ್ತಿದ್ದೆ.ಮುಂಬೈನ ಯಾವುದೋ ರೈಲ್ವೇ ನಿಲ್ದಾಣ. ರೈಲು ಹಳಿಗೆ ಸಿಕ್ಕು ಯಾರೋ ಛಿದ್ರ. ಆ ಶವದ ರುಂಡವನ್ನು ಕೈಲಿ ಎತ್ತಿಕೊಂಡು ಹೋಗುತ್ತಿದ್ದಾತ, ನನ್ನನ್ನು ನೋಡಿ, " ಜಬ್ ಝಿಂದಾ ತಾ, ಭಂಗೀ ಕೋ ಗಾಲೀ ದೇತಾ ಹೋಗಾ" ಅಂದು ತೆರಳಿದ.
(ಭಂಗೀ ಅಂದರೆ ಕೀಳು ಜಾತಿ)

ಒಂದಿಷ್ಟು ಜನ ಹದಿಹರೆಯದ ಹುಡುಗಿಯರು ಗುಂಪುಗುಂಪಾಗಿ ಏನೇನೋ ಹರಟುತ್ತ, ನಗುತ್ತ ದಾರಿ ಸಾಗಿಸುತ್ತಿದ್ದರು. ಎಲ್ಲಿದ್ದಳೋ ಗೊತ್ತಿಲ್ಲ, ಅವರೆದುರು ಹುಚ್ಚಿಯೊಬ್ಬಳು ಪ್ರತ್ಯಕ್ಷವಾಗಿ ಗುರಾಯಿಸಿದಳು. ಹುಡುಗಿಯರೆಲ್ಲ ಹೆದರಿ ದಿಕ್ಕಾಪಾಲು. ಅಲ್ಲಿದ್ದ ಮತ್ಯಾರೋ ನಕ್ಕರು. ಆವಾಗ ಹುಚ್ಚಿ ಅಂದಳಂತೆ,
"ಸಾರೀ ದುನಿಯಾ ಮೇರೇ ಕಪಡೇ ಪೆಹನ್ ಕೇ ಘೂಮ್ತೀ ಹೈ, ಔರ್ ಮುಝ್ ಪೇ ಹೀ ಹಸ್ತೀ ಹೈ"

6 ಕಾಮೆಂಟ್‌ಗಳು:

Lakshmi Shashidhar Chaitanya ಹೇಳಿದರು...

ಮಜಾ ಮಾಡಿ. ಕಥೆಗಳು ಸೂಪರ್. ವರದಿ "ಟಟಿಪಿಕಲಿ ಶ್ರೀನಿಧಿ".

[ನಾನು ಸಿಕ್ಕಾಪಟ್ಟೆ ಹೊಟ್ಟೆ ಉರ್ಕೋತಿದಿನಿ ಅನ್ನೋದು ಬೇರೆ ವಿಷಯ]

Vijendra ( ವಿಜೇಂದ್ರ ರಾವ್ ) ಹೇಳಿದರು...

naale enu karyakramagaliave anta helbahda shrinidhi??
Naale nanoo barbekanta iddene..

Sandeepa ಹೇಳಿದರು...

ಹೀಗೆ ಬರ್ತಾ ಇರ್ಲಿ ವರದಿಗಳು.. :)

Vijaya ಹೇಳಿದರು...

:-) copy paste maadilvalla ee sali!!!
bareetiru !

sunaath ಹೇಳಿದರು...

ಕಾಯ್ಕಿಣಿ ಕತೆ ಅರ್ಥ ಆಗ್ಲಿಲ್ಲ!

Unknown ಹೇಳಿದರು...

ಕಾಇಕಿಣಿ ಅವರ ಕಥೆ ಅರ್ಥಾಗ್ಲಿಲ್ಲ , ನನ್ನದೆ ಪ್ರಾಬ್ಲಮ್ ಕನ್ನಡ ಇವಾಗ ಇವಾಗ ಅರ್ಥನೇ ಆಗೋದಿಲ್ಲ, ದಯವಿಟ್ಟು ಯಾರದ್ರು ಅರ್ಥಮದ್ಕೊಲ್ಲಿಕ್ಕೆ ಸಹಾಯ ಮಾಡಿ