ಗುರುವಾರ, ನವೆಂಬರ್ 02, 2006

ಜೀವ ಭಾವದ ಜೊತೆಗೆ...

ಆ ಹುಲ್ಲುಗಾವಲಿನ ಹಸಿರು ಹಾದಿಯ ಮೇಲೆ,
ನಿನ್ನ ಜೊತೆ ನಡೆದ ಖುಷಿ,
ಜಗವೆಲ್ಲ ತಿರುಗಿದರೂ ಬಂದಿಲ್ಲವೆನಗೆ.

ಅಂದು ಬೇಸಿಗೆಯಲ್ಲಿ ನಾನು ಬಾಯಾರಿರಲು
ನೀನಿತ್ತ ಬೊಗಸೆ ಜಲ
ಇಂದಿಗೂ ಮಾಡುವುದು ನನ್ನೆದೆಯ ತಂಪು

ಶ್ರಾವಣದ ಸಂಜೆಯಲಿ ಆ ಸೋನೆ ಮಳೆಯೊಳಗೆ
ನಿನ್ನಯಾ ಸಾನಿಧ್ಯ
ಈ ಹೊತ್ತೂ ತೋಯುವುದು, ನನ್ನ ನೆನಪು

ಕೆರೆಯ ಏರಿಯ ಮೇಲೆ ತಣ್ಣನೆಯ ಗಾಳಿಯೊಳು
ಮುಂಗುರುಳ ನಾಟ್ಯ,
ಈಗಷ್ಟೇ ನಡೆಯಿತೋ ಎಂಬಂತೆ ಇಹುದು

ಇಂದು ನೀ ಇಲ್ಲ ಈ ಜಗದ ಬಂಧನದೊಳಗೆ
ನಿನ್ನ ಜೀವದ ಭಾವ
ನನ್ನ ಸುತ್ತಲೂ ಸೇರಿ ಕಾಯುತಿಹುದೆನ್ನ!

ಆ ಹುಲ್ಲುಗಾವಲಿನ ಹಸಿರ ಹಾದಿಯ ಮೇಲೆ......

4 ಕಾಮೆಂಟ್‌ಗಳು:

Pramod P T ಹೇಳಿದರು...

ನಿಧಿ,

ತುಂಬಾನೆ ಭಾವಪೂರ್ಣವಾಗಿದೆ ನಿಮ್ಮ ಕವನ!
ತಲೆ ಬರಹ ಇನ್ನೂ ಸೊಗಸಾಗಿದೆ.
ಮುಂದುವರೆಯಲಿ....

Sushrutha Dodderi ಹೇಳಿದರು...

ತುಂಬಾ ತುಂಬಾ ಚನಾಗಿ ಬರದ್ದೆ ಬ್ರದರ್.. Took me away for a minute..

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರಮೋದ, ಸುಶ್,

ನಿಮ್ಮಗಳ ನುಡಿಗೆ ಕೃತಜ್ಞ ! ಓದ್ತಾ ಇರಿ, ಅಭಿಪ್ರಾಯ ತಿಳಿಸಿ, ಬರಿಯ ಹೊಗಳಿಕೆ ಬೇಡ, ತಪ್ಪಿದ್ದರೆ ತಿದ್ದಿ!

Enigma ಹೇಳಿದರು...

"ಇಂದು ನೀ ಇಲ್ಲ ಈ ಜಗದ ಬಂಧನದೊಳಗೆ
ನಿನ್ನ ಜೀವದ ಭಾವ
ನನ್ನ ಸುತ್ತಲೂ ಸೇರಿ ಕಾಯುತಿಹುದೆನ್ನ!"

bahala artha poorna vagide.
jana bitaru nenepu galu kaduthade