ಗುರುವಾರ, ಮಾರ್ಚ್ 15, 2007

ಪ್ಲಾಟ್ ಫಾರಂ......

ಭೂಸಾವಾಳದ ರೈಲ್ವೇ ಸ್ಟೇಷನ್ ನ over bridge, ಭಾರತದ ದು:ಸ್ಥಿತಿಯನ್ನು ಬಿಂಬಿಸುವ ಒಂದು ಜಾಗ. ಸುಮಾರು ನೂರು- ನೂರೈವತ್ತು ಮೀಟರ್ ಉದ್ದ ಇರುವ ಈ ಸೇತುವೆ, ದಿನವೂ ಎಷ್ಟೋ ಜನರ ಕಾಲ್ತುಳಿತ ಅನುಭವಿಸುತ್ತದೆ. ಮೂರು ಮೀಟರ್ ಅಗಲದ ಈ ಸೇತುವೆ, ರೈಲು ಬಂದಾಗ ಮತ್ತಷ್ಟು ರಷ್ಶು. ಹೋಗುವುದಕ್ಕೆ ಜಾಗ ಇರುವುದಿಲ್ಲ, ಅಷ್ಟು ಅರ್ಜೆಂಟು ಎಲ್ಲರಿಗೂ. ನೂಕುನುಗ್ಗಲು. ಓಡುವವರು, ನಡೆಯುವವರು, ಕುರುಡರು, ಕುಂಟರು , ದೇಶದ ಎಲ್ಲ ಕಡೆಯ ಜನರು ಬರುತ್ತಾರೆ- ಹೋಗುತ್ತಾರೆ. ಬ್ರಿಡ್ಜ್ ಯಾವಾಗಲೂ ಧಡ್ ಧಡ್ ಸದ್ದು ಮಾಡುತ್ತಲೇ ಇರುತ್ತದೆ.

ಇದೇನೇ ಆದರೂ, ಇಲ್ಲಿನ ಒಂದು ಘಟನೆ ಮಾತ್ರ, ಒಂದು ಕ್ರೂರ ಸ್ವಪ್ನದಂತೆ ನನ್ನ ಮನಸ್ಸನ್ನು ಆವಾಗಾವಾಗ ಹಾದು ಹೋಗುತ್ತಲೇ ಇರುತ್ತದೆ.

ಆ ದಿನ , ಇನ್ನೂ ನೆನಪಿದೆ. ಎಂದಿನಂತೆ ೭.೨೦ರ ದಾದರ್ ಗಾಡಿಯನ್ನು ಹಿಡಿಯಲು ಓಡುತ್ತಿದ್ದೆ. ತನ್ನ ಮಗಳನ್ನು ಮಲಗಿಸಿ ಕುಳಿತಿದ್ದ ಒಬ್ಬ ಹೆಂಗಸು ಇದ್ದಕ್ಕಿಂದ್ದಂತೆ ಅವಳನ್ನು ಎಬ್ಬಿಸಲು ಶುರು ಮಾಡಿದಳು. ಮಗು ಏಳಲಿಲ್ಲ. ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನಿಸಿದಳು, ಯಾವುದೇ response ಇಲ್ಲ! ಎದೆಯ ಮೇಲೆ ಕೈಯಿಟ್ಟಳು, ಕೈ ಮುಟ್ಟಿ ನೋಡಿದಳು, ಬಹುಶಃ ತಣ್ಣಗಿತ್ತು. ಯಾವುದೇ ಉಸಿರಾಟದ ಲಕ್ಷಣ ಸಹಃ ಕಾಣಲಿಲ್ಲ. ಒಮ್ಮೆಗೇ ತಾಯಿಯ ಮುಖಚರ್ಯೆಯೂ ಬದಲಾಯಿತು. ಜೋರಾಗಿ ಅಳತೊಡಗಿದಳು. ಮಗಳು ಈ ಭೂಮಿಯನ್ನ ತ್ಯಜಿಸಿದ್ದಳು. ರೋದನ ಇನ್ನೂ ಜೋರಾಯ್ತು. ಜನರೆಲ್ಲ ಏನಾಯ್ತೆಂದು ನೋಡಲು ಅವಳನ್ನ ಮುತ್ತಿದರು. " ರೋನಾ ಮತ್ ತೇರಿ ಬೇಟಿ ಮರ್ ಗಯಿ ಹೈ" ಎಂದ ಒಬ್ಬ. "ಹೇ ಶೋರ್ ಬಂದ್ ಕರೋ" ಅಂದ ಇನ್ನೊಬ್ಬ.

ಸ್ವಲ ಹೊತ್ತಿನಲ್ಲಿ RPF ಬಂತು. "ಏಯ್ ಚಲ್ ಹಟ್!! ಲಾಶ್ ಲೇಕೇ ಚಲ್!" ಎಂದು ಗದರಿದರು. ಅವಳು ಸುಮ್ಮನೆ ಮಗಳ ಶರೀರವನ್ನು ಹೊತ್ತು,ಸ್ಟೇಶನ್ ನಿಂದ ಹೊರ ನಡೆದಳು, ಅಳುತ್ತಾ... ನಾನು ಇವನೆಲ್ಲ ನೋಡಿ ಪ್ಲಾಟ್ ಫಾರಂ ನಂಬರ್ ೩ಕ್ಕೆ ಹೋಗಿ, trainನಲ್ಲಿ ಕುಳಿತೆ..

ಮರುದಿನ ಬೆಳಗ್ಗೆ ಎಂದಿನಂತೆ ಪ್ಲಾಟ್ ಫಾರಂ ಇವನ್ನೆಲ್ಲ ಮರೆತು, ಜನರ ಕಾಲ್ತುಳಿತ ಅನುಭವಿಸುತ್ತಾ ಬಿದ್ದುಕೊಂಡಿತ್ತು...

Life is Different than what you think, right?!

( ಈ ಘಟನೆ, ನನ್ನ ಸ್ನೇಹಿತ ನಾಣಿಯ ಅನುಭವ. ಅವನದೇ ಬರಹ ಕೂಡಾ. ನಾನು net ಗೆ ಏರಿಸಿದ್ದೇನೆ , ಅಷ್ಟೆ.)

3 ಕಾಮೆಂಟ್‌ಗಳು:

Sandeepa ಹೇಳಿದರು...

ಏಕೋ ಈ ಹಾಡು ನೆನಪಾಯ್ತು..

ನೀನೆಲ್ಲೆ ನಡೆವೆ ದೂರ
ಎಲ್ಲೆಲ್ಲು ಲೋಕವೇ,
ಈ ಲೋಕವೆಲ್ಲ ಘೋರ
ಎಲ್ಲೆಲ್ಲು ಶೋಕವೇ..


ನನಗೆ ಈ ಹಾಡೇ ಏಕೆ ನೆನಪಾಯಿತೋ? ಸರಿಯಾಗಿ ಗೊತ್ತಿಲ್ಲ. ನನಗೆ ರೈಲಿನ ಕಥೆಗಳು ಮತ್ತು, ಸಮುದ್ರದ ದಂಡೆಗಳು ಈ ಹಾಡನ್ನು ನೆನಪಿಸುತ್ತವೆ..

ಅದರಲ್ಲೂ ಒಬ್ಬನೇ ಸಮುದ್ರದಂಚಿನಲ್ಲಿ, ಸುಡುಬಿಸಿಲಿನಲ್ಲಿ ನಡೆವಾಗ...

Vijendra ( ವಿಜೇಂದ್ರ ರಾವ್ ) ಹೇಳಿದರು...

Howdu Sir, Citigala kathene hage.. Pakkada maneyava satroo eche maneyavnige gottagudilla..

Ade e ghatane namam nimma oorinalli agidre response hegirtittu?

ಸಿಂಧು sindhu ಹೇಳಿದರು...

"ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ". ಇದು ನನ್ನ ಅನುಭವ ಕೂಡಾ. ವಿಪರ್ಯಾಸವೆಂದರೆ ಈ ಸಮನ್ವಯದ ಅರಿವು ಘಟನೆ ನಡೆಯುವಾಗ ಆಗಿರುವುದಿಲ್ಲ..
ಈ ಆಸಕ್ತಿಕರ ಬರಹವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ.