ಮಂಗಳವಾರ, ಮಾರ್ಚ್ 27, 2007

ಕುಡುಕರ್ ಸಾವಾಸ ಅಲ್ಲ!

ಏನೇ ಹೇಳಿ, ಈ ಕುಡುಕರಿದಾರಲ್ಲ, ಅವರ ಸಹವಾಸ ಮಾತ್ರ ಅಲ್ಲ ನೋಡಿ. ಅವರಿಗೆ ಬೈಯೋ ಹಾಂಗೂ ಇಲ್ಲ, ಬೈದ್ರೆ ಅರ್ಥ ಆಗೋದೋ ಇಲ್ಲ!

ನಾನು ಮತ್ತು ದಯಾನಂದ ಒಂದಿನ ರಾತ್ರೆ ೧೦ ಗಂಟೆ ಸುಮಾರಿಗೆ ಯಾರದೋ ಮನೆಗೆ ಊಟಕ್ಕೆ ಹೋಗಿ ವಾಪಸ್ ಬರುತ್ತಿದ್ದೆವು. ದಯಾನಂದ ಬೈಕ್ ಹೊಡೀತಾ ಇದ್ದ. ಅದೂ ಇದು ಹರಟೆ ಹೊಡ್ಕೊಂಡು ಅರಾಮಾಗಿ ಬರ್ತಾ ಇದ್ವಿ. ರಸ್ತೆ ಬೇರೆ ಖಾಲಿ ಇತ್ತು. ಶಂಕರ್ನಾಗ್ ಸರ್ಕಲ್ ನ ಅರಳೀ ಮರಕ್ಕೆ ಒಂದು ಸುತ್ತು ಹೊಡೆದು ಮುಂದೆ ಬಂದ್ರೆ, ನಮ್ಮಿಂದ ಒಂದು ೧೦ ಮೀಟರ್ ದೂರದಲ್ಲಿ ಒಬ್ಬ ಕುಡುಕ ಮಹಾಶಯ, ತಾನು ಜೋಲಿ ಹೊಡೆಯುತ್ತ, ತನ್ನ ಜೊತೆ ಇರುವ ಲಡಕಾಸಿ ಸೈಕಲ್ಲನ್ನೂ ಕೂಡ ಹೇಗೋ ಬ್ಯಾಲೆನ್ಸ್ ಮಾಡುತ್ತಾ, ನಡು ರಸ್ತೆಯಲ್ಲಿ ಒದ್ದಾಡುತ್ತಿದ್ದ. ನಾವೇನಾದರೂ ಅದೇ ವೇಗದಲ್ಲಿ ಹೋಗಿದಿದ್ದರೆ ಅವನಿಗೇ ಗುರಿಯಿಟ್ಟು ಢಿಕ್ಕಿ ಹೊಡೆಯೋದು ಖಾತ್ರಿಯಾಗಿತ್ತು. ದಯಾ ಅನಿವಾರ್ಯವಾಗಿ ಬ್ರೇಕ್ ಹಾಕಿದ, ನಾವಿಬ್ಬರೂ ಬಿದ್ದೆವು, ಬೈಕ್ ಸಮೇತ.

ನಾವು ಎದ್ದು, ಬೈಕನ್ನೂ ಎಬ್ಬಿಸಿ, ಧೂಳು ಕೊಡವಿಕೊಂಡು ನಿಲ್ಲುವ ಹೊತ್ತಿಗೆ ಆ ಕುಡುಕ ನಮ್ಮ ಬಳಿಗೇ ಬಂದ, ಅವನ ತಗಡು ಸೈಕಲ್ ಜೊತೆಗೆ, ಮತ್ತು ಬಹಳ ಸವಿನಯದಲ್ಲಿ ಕೇಳಿದ,

"ನಾಯಿ ಅಡ್ಡ ಬಂತಾ ಸಾರ್?, ಭಾಳ ಬೇವರ್ಸಿಗಳು ಈ ನಾಯಿ ಮುಂಡೇವು, ಏನ್ ಮಾಡೋದು ಹೇಳಿ..
ಚೇ, ಎಲ್ಲಾದ್ರು ಪೆಟ್ಟಾಯ್ತಾ?"

ನಮಗೆ ಏನು ಉತ್ತರಿಸಬೇಕೆಂದೇ ತಿಳಿಯಲಿಲ್ಲ!

12 ಕಾಮೆಂಟ್‌ಗಳು:

Lanabhat ಹೇಳಿದರು...

olle incidentu chennagi barediddeeeri

Parisarapremi ಹೇಳಿದರು...

ಕುಡಿತದಿಂದ ಸರ್ವನಾಶ ಅಂತ ಗಾಂಧೀಜಿ ಹೇಳಿಲ್ಲವೇ... ಅವನು ಕುಡಿದ, ನಿಮಗೆ ಶಿಕ್ಷೆ, ನಮಗೆ ಹಾಸ್ಯ... :-)

ಅನಾಮಧೇಯ ಹೇಳಿದರು...

ಅಯ್ಯೋ ಕೆಲ ಕುಡುಕ ಮಹಾ ಅತಿರತರಿಗೆ ಕುಡಿದ ಮೇಲೆ ಜಾಸ್ತಿ ಲೋಕಪಾವನ ಉಂಟಾಗಿ ಆ ರೀತಿ ಹೇಳಿರಬೇಕು ಅನಿಸುತ್ತೆ...

ಅನಾಮಧೇಯ ಹೇಳಿದರು...

heheheh,
chennagidi anna...


Cheers
Chin

ಅನಾಮಧೇಯ ಹೇಳಿದರು...

ಅವನೇನೊ ಕುಡಿದಿದ್ದ ಬೀಡಿ ... ನೀವು ಬರೆದಿರೊದು ನೋಡಿದರೆ ಇನ್ನು ದೇವರು ಇಳಿದಿಲ್ಲ ಅನ್ನಿಸ್ಸುತ್ತೆ......ಹೀ....
" ಅಯ್ಯೋ!!! ಕುಡುಕ ಮುಂಡೆವು ತಾವು ಬದುಕೊಲ್ಲ , ಬದುಕೊರನ್ನು ಬಿಡಲ್ಲ .
ತಾವು ಸಾಯ್ತಾರೆ ಅವ್ರನ್ನ ನಂಬಿದರನ್ನು ಸಾಯ್ತಾರೆ .........."

ಅಮರ ಮಧುರ ಪ್ರ್‍ಏಮ ದಿಂದ .....

ಅನಾಮಧೇಯ ಹೇಳಿದರು...

VOLLE COMEDY KANRI SHRRENI. CHNNAGIDE

Unknown ಹೇಳಿದರು...

Olle incidentu adre chikk doubt
Kudidirudu Cycle savarana all Bike savarara antha ??????

Unknown ಹೇಳಿದರು...

simple agi nago hage bardiddiri .....

Sree ಹೇಳಿದರು...

very nice range out here! link haakkotideeni nanna blogninda:)

ಶ್ರೀನಿಧಿ.ಡಿ.ಎಸ್ ಹೇಳಿದರು...

@lana
thank u...

@parsirapremi
ಬೆಕ್ಕಿಗೆ ಆಟ.... :)

ಪುಷ್ಪಾ,
ಏನ್ ಮಾಡೋದು ಹೇಳು, ನಮ್ ಹಣೇಬರ!!

ಚಿನ್ಮಯಾ,

ಥ್ಯಾಂಕ್ಸಮ್ಮಾ ದೋಸ್ತಾ:)

ಶ್ರೀನಿಧಿ.ಡಿ.ಎಸ್ ಹೇಳಿದರು...

ಅಮರ್,
ತಾವು ಸಾಯ್ತಾರೆ ಅವ್ರನ್ನ ನಂಬಿದರನ್ನು ಸಾಯ್ತಾರೆ- ಸರಿಯಾಗಿ ಹೇಳಿದ್ರಿ!!

LUCKY,
ನಂಗೆ ಕಾಮೆಡಿ ಆಗಿರ್ಲಿಲ್ಲ ಆವಾಗ!!

praveen ,
ಏನಯ್ಯಾ, ನೀನೇ ಹೀಗೆ ಹೇಳಿದ್ರೆ ನನ್ನ ಗತಿ ಏನು!!!
rams,
thank u boss!

ಶ್ರೀ,
ನಾನು ಕೃತಜ್ಞ್ನ!:)

Enigma ಹೇಳಿದರು...

avru nimmanenadru nayi antah thilkondra? :-P