ಸೋಮವಾರ, ಜೂನ್ 25, 2007

ಕೆಂಪು

ಅಂಬುಲೆನ್ಸಿನ ಮೇಲೆ ತಿರುಗೋ
ಬುರುಡೆ.
ಬೈಕು ಕಾರಿನ ಬ್ರೇಕ್
ಲೈಟು.
ಟ್ರಾಫಿಕ್ ಸಿಗ್ನಲ್ಲು.

ಮುತ್ತೈದೆಯ ಭ್ರೂ ಮಧ್ಯ.
ಯೋಧನ ತಿಲಕ
ರಂಗೋಲಿ ನಡುವಿನ
ರಂಗು
ದೇವರ ಮೇಲಿನ ದಾಸವಾಳ.

ಹುಡುಗನ ಕೈಯ ಗುಲಾಬಿ,
ಅವಳ ಬಳೆಗಳು.
ಸಂಜೆ ಸೂರ್ಯ,
ಸರದೊಳಗಿನ ಹವಳ.

ಹೆಂಡಗುಡುಕನ
ಕಣ್ಣು
ಕತ್ತಿಯಂಚಿನ ರಕ್ತ.
ಸ್ಲಮ್ಮಿನಂಚಿನ ಬೆಳಕು

ಕೆಂಪಿಗೆ ಹಲವು ಬಣ್ಣ!

8 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಬಿಳಿ ----ಶುಭ್ರತೆ, ಶಾಂತಿ
ಹಳದಿ---ಸ್ನೇಹ
ಹಸಿರು--- traffic ಸಿಗ್ನಲ್, ಮುತ್ತೈದೆ ಕೈನಲ್ಲಿರೊ ಬಳೆಗಳು, ಭುಮಿ ತಾಯಿಯ ಸೀರೆ
ನಿಲಿ---ಶಾಯಿ(ಇಂಕ್), ಭಾನು
ಹೀಗೆ ಲಿಸ್ಟ್ ಮಾಡ್ಬಹುದು.... ಆದ್ರೆ ಕೆಂಪು...ಕೆಂಪೆ
ಕವನ ಚೆನ್ನಾಗಿದೆ...

ನಂದಕಿಶೋರ ಹೇಳಿದರು...

"ಸುಂದರ ಈ ಕೆಂಪು ಗೆಳೆಯಾ ಪ್ರೇಮದ ಈ ಕೆಂಪು||
ಪಾರಿವಾಳದಾ ಪಾದ ಪಾರಿಜಾತದಾ ತೊಟ್ಟು |
ಮೊಲದಾ ಪಿಳಿಪಿಳಿ ಕಣ್ಣು ಕ್ರಿಕೇಟಿನಾಟದ ಚೆಂಡು||..."

- ಈ ರೀತಿಯಾಗಿ ಆರಂಭವಾಗುತ್ತಿದ್ದ ಹಾಡೊಂದು ಬೆಂ.ದೂ.ದ ಆರಂಭದ ದಿನಗಳಲ್ಲಿ ಬರುತ್ತಿತ್ತು. ಬಹುಶಃ ಬಿ.ಆರ್.ಛಾಯಾ ಹಾಡಿದ್ದು. ಹಾಡಿನ ಸಾಹಿತ್ಯ, ಮಾಧುರ್ಯಗಳಿಂದ ಅದು ಮನಸ್ಸನ್ನು ತುಂಬಾ ಸೆಳೆದಿತ್ತು. ನಿಮ್ಮ ಕವನ ಓದಿ ಆ ಹಳೆಯ ದಿನಗಳು ತಟಕ್ಕನೆ ನೆನಪಾದವು. ಚೆನ್ನಾಗಿದೆ :-)

ಅನಾಮಧೇಯ ಹೇಳಿದರು...

wheeling madalu hogi odeda breaklightina banna kempe?

athva odeda nantara bana change aguttadeye ?


Cheers
Chin

Shree ಹೇಳಿದರು...

ಅತ್ತಿತ್ತ ನೋಡಲಿಷ್ಚವಿಲ್ಲದಿದ್ದರೆ ಕೆಂಪು ಒಂದೇ ಬಣ್ಣವಾಗುತ್ತದೆ..
ನೋಡುವ ಮನವಿದ್ದರೆ, ಕಣ್ಣಿದ್ದರೆ ಕೆಂಪಲ್ಲೂ ಹಲವಾರು ಬಣ್ಣ...
ಚೆನ್ನಾಗಿದೆ ಶ್ರೀನಿಧಿ.

ಕೆಂಪು ಅಂದೊಡನೆ ನನಗೆ ನೆನಪಾಗುವ ಒಂದು ವಿಷಯ ಐಶ್ವರ್ಯಾ ರೈ ಅಭಿನಯದ, Paul Mayeda Berges
ನಿರ್ದೇಶನದ 'ಮಿಸ್ಟ್ರೆಸ್ ಆಫ್ ಸ್ಪೈಸಸ್' ಚಿತ್ರ. ಅದರಲ್ಲಿ ಕೆಂಪು ಬಣ್ಣವನ್ನು ಉಪಯೋಗಿಸಿಕೊಂಡ ರೀತಿ... simply marvellous.

Sushrutha Dodderi ಹೇಳಿದರು...

@ yaatrika

>> ಸುಂದರ ಈ ಕೆಂಪು ಗೆಳೆಯಾ ಪ್ರೇಮದ ಈ ಕೆಂಪು||
ಪಾರಿವಾಳದಾ ಪಾದ ಪಾರಿಜಾತದಾ ತೊಟ್ಟು |
ಮೊಲದಾ ಪಿಳಿಪಿಳಿ ಕಣ್ಣು ಕ್ರಿಕೇಟಿನಾಟದ ಚೆಂಡು

-ಇದು ಬಿ.ಆರ್. ಲಕ್ಷ್ಮಣರಾಯರ ಕವನದ ಸಾಲುಗಳು. ಅದರ ಶೀರ್ಷಿಕೆಯೂ 'ಕೆಂಪು' ಅಂತಲೇ.

ಸಿಂಧು sindhu ಹೇಳಿದರು...

ಶ್ರೀನಿಧಿ,

ಕವಿತೆ ಇಷ್ಟವಾಯಿತು.

ಓದಿದ ಕೂಡಲೆ ಲಂಕೇಶರ "ಕೆಂಪಾದವೋ" ನೆನಪಾಯಿತು. ಮನ ಮೊಗ್ಗಾಯಿತು. ಎರಡನೆ ಓದು ಓದುವಾಗ ಒಂದು ಸುಂದರ ಕೆಂಪು ಅಷ್ಟಷ್ಟೇ ಅರಳಿತು.
ಕೆಂಪಿಗೆ ಬಣ್ಣ ಒಂದೇ ಕೆಂಪು, ನೋಟ ಹಲವು - ಸೊಂಪು,ರಂಪ ಎರಡೂ.

ಥ್ಯಾಂಕ್ಸ್

ಅನಾಮಧೇಯ ಹೇಳಿದರು...

sirigereya niralli birida tavareyalli kempaagi ninna hesaru....k.s.n avara rachane nenpaytu.makLige ishta aago bannanu kempu....ಕೆಂಪಿಗೆ ಹಲವು ಬಣ್ಣ! nijvaglu super kanri

ಶ್ರೀನಿಧಿ.ಡಿ.ಎಸ್ ಹೇಳಿದರು...

@Anonymous,
ಕೆಂಪು ಬಣ್ಣ ಅಂದ್ರೆ ಒಂದು ತೆರನಾದ ಆಕರ್ಷಣೆ .. ನೀವ್ ಹೇಳಿದ ಹಾಗೆ, ಕೆಂಪು ಕೆಂಪೇ!

@ yaatrika,
ಆಹಾ! ಮರೆತೇ ಹೋಗುತ್ತಿದ್ದ ಈ ಹಾಡನ್ನ ಮತ್ತೆ ನೆನ್ಪಿಸಿದ್ದಕ್ಕೆ ಥ್ಯಾಂಕ್ಸು!:)

ಚಿನ್ಮಯಾ,
:) ಮತ್ತೆ ನಿನ್ ಆ ವ್ಹೀಲಿಂಗ್ ಸಾಹಸ ನೆನ್ಪ್ ಮಾಡದ ಮಾರಾಯ! ಕತೆ ಹಾಳಾತು:)

ಶ್ರೀ,
'ಮಿಸ್ಟ್ರೆಸ್ ಆಫ್ ಸ್ಪೈಸಸ್' ಚಿತ್ರನಾ ನಾನು ನೋಡಿಲ್ಲ. ನೋಡಬೇಕಾಯಿತು ಹಾಗಾದರೆ. ಹಮ್..

ಸುಶ್,
:) ಕವಿಯ ಹೆಸರು ಹೇಳಿದ್ದಿಕ್ಕೆ ಧನ್ಯವಾದ, ನಾನೂ ತಲೆ ಕೆಡಿಸಿಕೊಳ್ಳುತ್ತಿದ್ದೆ!

ಅಕ್ಕಾ,

ಎರಡನೆ ಓದು ಓದುವಾಗ ಒಂದು ಸುಂದರ ಕೆಂಪು ಅಷ್ಟಷ್ಟೇ ಅರಳಿತು- ಆಹಾ! ನಿಂಗೆ ಹೀಂಗಿದ್ದೆಲ್ಲ ಸಾಲು ಹ್ಯಾಂಗೆ ಹೊಳಿತು?:)

Anonymous,

ನರಸಿಂಹ ಸ್ವಾಮಿ ನನ್ನಿಷ್ಟದ ಕವಿ, ಅವರ ಸಾಲುಗಳನ್ನ ನೆನಪಿಸಿದ್ದಕ್ಕೆ ಋಣಿ.