ಗುರುವಾರ, ಫೆಬ್ರವರಿ 14, 2008

ಅರ್ಧ ಕವಿತೆಗಳು

ಕಡಲು ಜಗದ ದೊಡ್ಡ ಪ್ರೇಮಿ
ನಿತ್ಯ ಮಿಲನ ಅದಕೆ.
ನದಿಗಳಿಹುದು ಲಕ್ಷ ಲಕ್ಷ
ತೀರದದರ ಬಯಕೆ.
****
ನಟ್ಟಿರುಳ ದಾರಿಯಲಿ ನಡೆಯುತ್ತಿದ್ದರು ಅವರು
ದೂರ ತಿರುವಿನಲೆಲ್ಲೋ ಕಂಡಿತ್ತು ಸೊಡರು.
ಬೆಳಕ ನೋಡಿದ್ದೇ ತಡ, ಕೈ ಬೆಸುಗೆ ಬಿಗಿಯಿತು
ಹೆಜ್ಜೆಗಳ ಪಥ ಮೆಲ್ಲ ಹಿಂದಕ್ಕೆ ತಿರುಗಿತು
****
ಕೆರೆಯ ಕಟ್ಟೆಯ ಮೇಲೆ ಅವಳು ನಡೆದಿದ್ದಳು.
ಮಿಂದೊದ್ದೆ ಪಾದಗಳ ಅಲ್ಲೆ ಊರಿದ್ದಳು.
ಹೂವು ತಂದಿದ್ದನವ ದೇವರಾ ಪೂಜೆಗೆ.
ಚೆಲ್ಲಿ ಹೋದವು ಎಲ್ಲ, ಒದ್ದೆ ಪಾದಗಳ ಜಾಡಿಗೆ
****

15 ಕಾಮೆಂಟ್‌ಗಳು:

ಅನಿಕೇತನ ಹೇಳಿದರು...

ಅರ್ಧ ಕವಿತೆಯಲ್ಲಿ ಪೂರ್ತಿ ಅರ್ಥ ಹೇಳುವ ನಿಮ್ಮ ಶೈಲಿ ನಿಜಕ್ಕೂ ಚನ್ನಾಗಿದೆ.ಹಾಗೆಯೇ ನಿಮ್ಮಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಾಗದಿದ್ದಕ್ಕೆ ವಿಷಾದಿಸುತ್ತೇನೆ. ಹಾಗೆಯೇ ತುಂಬು ಹೃದಯದ ಶುಭಹಾರೈಕೆಗಳು.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

"ಅರ್ಧಕವಿತೆ"ಗಳೆಂಬ ಪರಿಪೂರ್ಣತೆ ಹೊಂದಿದ ಸಾಲುಗಳು ಇಷ್ಟವಾದವು.

ತೇಜಸ್ವಿನಿ ಹೆಗಡೆ ಹೇಳಿದರು...

ಒಂದು ಪೂರ್ಣ ಕವಿತೆ ಹೇಳುವ ಎಲ್ಲಾ ಅರ್ಥಗಳನ್ನು ಅರ್ಧ ಕವಿತೆ ಹೇಳಿದೆ. ತುಂಬಾ ಚೆನ್ನಾಗಿದೆ.

Vijaya ಹೇಳಿದರು...

tumba chennagide Shreenidhi ... khushi aaytu odi :-) ... neenu nijakkoo bhavajeevi !!

ಬೆಳಗು! ಹೇಳಿದರು...

ತನ್ನ ಸಾಲುಗಳ ಪರಿದಿಯಲ್ಲಿ ನಿಲುಕುವ ನಿಲುಕದ ಭಾವಗಳನ್ನ ಬಿಡಿಸಿ, ಬಣ್ಣವ ಹಚ್ಚುವ ಕವಿತೆಯ ಇನ್ನೊಂದು ಅರ್ಧ ಕವಿಯೆ ಆಗಿರಬಲ್ಲ....

Parisarapremi ಹೇಳಿದರು...

class....

ಅನಾಮಧೇಯ ಹೇಳಿದರು...

ನದಿಯ ಸಿಹಿನೀರನೆಲ್ಲ ಕುಡಿದು ...
ಉಪ್ಪು ನೀರು ಮಾಡೊ ಸಮುದ್ರದ್ದು ಭಗ್ನ ಪ್ರೇಮ ಅಲ್ವಾ?

Srinivasa Rajan (Aniruddha Bhattaraka) ಹೇಳಿದರು...

bahaLa khushi aaytu Odi.. :) tumba chennagide aNNayya

ಅಂತರ್ವಾಣಿ ಹೇಳಿದರು...

ಶ್ರೀನಿಧಿ ಅವರೆ,
ಸೊಗಸಾಗಿದೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಅನಿಕೇತನರೇ,

ಧನ್ಯವಾದಗಳು..

ಶಾಂತಲಾ ಮೇಡಮ್,
:) ಇವು ನಿಜಕ್ಕೂ ಅರ್ಧ ಕವಿತೆಗಳೇ!

ತೇಜಸ್ವಿನತ್ಗೇ,

ತಡಿ, ಈ ಮೂರೂ ಅರ್ಧ ಕವಿತೆಗಳು ಪೂರ್ತಿಯಾಗಲಿವೆ!

ವಿಜಯಾ- ಏನ್ ಮೇಡಮ್, ಸಿಕ್ಕಾಪಟ್ಟೆ ದಿನ ಆದ್ ಮೇಲೆ ಕಮೆಂಟೆಡ್ಡು!:)

ಬೆಳಗು- ಯಾಕೋ ಅಜೀರ್ಣ ಆಗಿಬಿಡತ್ತೆ ನಂಗೆ, ಅಷ್ಟೆಲ್ಲ ಹೊಗಳಬೇಡಿ:)

ಅರುಣ, ಗಂಡಭೇರುಂಡ - ಥ್ಯಾಂಕ್ಸು, ಅರುಣ ಈ ಕವನಕ್ಕೆ ಲಿಂಕ್ ಬೇರೆ ಹಾಕ್ಬಿಟ್ಟಿದೀಯ ಬ್ಲಾಗಲ್ಲಿ!!

ಅನಾನಿಮಸ್ - ಹುಂ, ನೀವ್ ಹೇಳೋದೂ ಒಂದ್ ತರಾ ಕರೆಕ್ಟು!

ಜಯಶಂಕರ್, ಹೀಗೇ ಬರುತ್ತಿರಿ.

ತನ್ ಹಾಯಿ ಹೇಳಿದರು...

ಮೊದಲ 'ಅರ್ಧ' ಬಹಳ ಹಿಡಿಸಿತು.
nice ardhas..

Unknown ಹೇಳಿದರು...

namaskara....
tumba dinagaLa nantra ittichegina ella postings odide. suuper. tumba khushi aytri. barita iri...loads of best wishes to u.

ಅನಾಮಧೇಯ ಹೇಳಿದರು...

ellA mooru putagaLallu vibbinathe kandibandide but adara bhAvane ondeAgidhe !

"ಕಡಲು ಜಗದ ದೊಡ್ಡ ಪ್ರೇಮಿನಿತ್ಯ ಮಿಲನ ಅದಕೆ.ನದಿಗಳಿಹುದು ಲಕ್ಷ ಲಕ್ಷ ತೀರದದರ ಬಯಕೆ".
E melinasaLugalu thumbAne simple aagidru varNanAthiThavagide.

sunaath ಹೇಳಿದರು...

ಶಹಭಾಶ್!

ಅನಾಮಧೇಯ ಹೇಳಿದರು...

ಶ್ರೀನಿಧಿ,
ನಿಮ್ಮ ಚಿತ್ರಚಾಪ ಓದಬೇಕಿದೆ. ಎಲ್ಲಿ ಸಿಗುತ್ತೆ ಅಂತ ತಿಳಿಸಿ. ನಾನು ಭೇಟಿ ನೀಡುವ ಬುಕ್ ಸ್ಟಾಲುಗಳಲ್ಲಿ ಕಾಣಿಸಲಿಲ್ಲ. ಬೆಲೆ ಎಷ್ಟೆಂದು ತಿಳಿಸಿದರೆ ನಿಮ್ಮಿಂದಲೇ ತರಿಸಿಕೊಳ್ಳುತ್ತೇನೆ.
-ಜೋಗಿ