ಮಂಗಳವಾರ, ಫೆಬ್ರವರಿ 05, 2008

ಜಂಗಮ ಬಿಂಬಗಳು - ೨

ಟ್ರಾಫಿಕ್ ಜಾಮ್ ಆಗಿತ್ತು. ನನ್ನ ಬೈಕಿನ ಪಕ್ಕದ ಐಷಾರಾಮಿ ಕಾರಿನ ಹಿಂದಿನ ಸೀಟಿನಲ್ಲಿ ಹುಡುಗನೊಬ್ಬ ಕೂತಿದ್ದ, ಸುಮ್ಮನೆ. ಐದು ಹತ್ತು ನಿಮಿಷ ಕಳೆಯಿತು ಹಾಗೇ. ನಾನು ನೋಡುತ್ತಿದ್ದ ಹಾಗೆಯೇ ಆ ಹುಡುಗ ಬ್ಯಾಗಿಂದ ಮೆಲ್ಲನೆ ನೋಟ್ ಬುಕ್ ತೆಗೆದ. ಅರೇ, ಇಲ್ಲೇ ಹೋಮ್ ವರ್ಕ್ ಮಾಡುತ್ತಾನಾ? ಅಂತ ಅಂದುಕೊಂಡೆ. ಆದರೆ ಅವನು ನೋಟ್ ಬುಕ್ಕಿಂದ ಹಾಳೆ ಹರಿದ. ಅಡ್ಡ ಉದ್ದ ಮಡಚಿ ರಾಕೆಟ್ ಮಾಡಿದ. ಕಿಟಕಿ ಮೆಲ್ಲನೆ ಇಳಿಸಿ, ಬೀಸಿ ಒಗೆದ. ಅದು ಎಷ್ಟು ದೂರ ಹಾರಿತು ಅನ್ನುವುದು ನನಗೆ ಮುಖ್ಯವಾಗಲಿಲ್ಲ.
**********
ನಾನು ಆಕೆಯನ್ನು ಮೊದಲು ನೋಡಿದ್ದು ಆ ಜಾಗದಲ್ಲಿ. ತುಂಬ ಬೇಸರದಲ್ಲಿದ್ದೆ ಮೊನ್ನೆ. ಬೈಕು ಅವಳನ್ನು ನೋಡಿದಲ್ಲೇ ಹಾದು ಹೋಗುತ್ತಿತ್ತು. ಅತ್ತ ತಿರುಗಿದರೆ, ಅವಳು ಕಂಡಳು.
**********
ಹೊಸದರಲ್ಲಿ ಟ್ರಾಫಿಕ್ ಸಿಗ್ನಲ್ ಹಸಿರಾದರೆ ಸಾಕು, ನುಗ್ಗಬೇಕು ಅನ್ನಿಸುತ್ತಿತ್ತು. ಈಗೀಗ ಅದು ಕೆಂಪಾಗಿಯೇ ಇರಲಿ ಅನ್ನಿಸುತ್ತದೆ.

16 ಕಾಮೆಂಟ್‌ಗಳು:

Srinidhi T G ಹೇಳಿದರು...

ಎದುರಿನ ಡಬ್ಬಾ ಲಾರಿ ಮೂತಿ ಮೇಲಕ್ಕೆ ಬುಸ್ಸಂತ ಹೊಗೆ ಬಿಟ್ಟಾಗ್ಲೂ ಹಂಗೇ ಅನ್ಸತ್ತಾ? :-)

Parisarapremi ಹೇಳಿದರು...

ರಾಕೆಟ್ ಮಾಡಿ ಎಸೆದ ಹುಡುಗನ ಕೆನ್ನೆಗೆ ಬಾರಿಸಬೇಕಿತ್ತು!! ;-)

ಟ್ರಾಫಿಕ್ ಸಿಗ್ನಲ್ ಅಲ್ಲಿ ಕೆಂಪಿದ್ದರೂ ನುಗ್ಗೋರಿಗೆ ಏನ್ ಹೇಳ್ತೀರ?

Sandeepa ಹೇಳಿದರು...

ಲೈಫೇ ಜೀವನ..

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿಯವರೆ...
ಬಿಂಬಗಳು ಚೆನ್ನಾಗಿ ಮೂಡಿಬಂದಿವೆ, ಅದರಲ್ಲಿಯೂ ರಾಕೆಟ್ ಎಸೆದ ಪೋರನ ಬಿಂಬ .....
ತುಂಬ ಇಷ್ಟವಾದವು.

ಮೃಗನಯನೀ ಹೇಳಿದರು...

ಅಲ್ಲಿ ನಿನಗೆ ಕಂಡ ಹುಡುಗಿ ನಾನಾ?? ;-)

ಚಂದ ಇದ್ದು. ಕೊನೆಯ ಬಿಂಬ ಕಾಡುತ್ತಿದ್ದೆ

ಶ್ಯಾಮಾ ಹೇಳಿದರು...

ಎರಡನೆಯದು ತುಂಬ ಇಷ್ಟ ಆತು.. ನಂಗು ಒಂದೊಂದು ಸಲ ಹಂಗೆ ಆಗ್ತು :)

Sushrutha Dodderi ಹೇಳಿದರು...

ಛೇ!

ಅನಾಮಧೇಯ ಹೇಳಿದರು...

LOVELEEE.
=JOGI

Seema S. Hegde ಹೇಳಿದರು...

ಎಲ್ಲವೂ ಚೆನ್ನಾಗಿವೆ, especially ಎರಡನೆಯದು.

ತೇಜಸ್ವಿನಿ ಹೆಗಡೆ ಹೇಳಿದರು...

ಮೊದಲನೆಯ ಮತ್ತು ಕೊನೆಯ ಬಿಂಬಗಳು ತುಂಬಾ ಇಷ್ಟವಾದವು.

Shree ಹೇಳಿದರು...

SUUPERB!!

ಕೊನೆಯದಕ್ಕೆ ಈ ಪ್ರತಿಕ್ರಿಯೆ -
ಪಕ್ಕಾ ಮರ್ಲು...!

ಸಿಗ್ನಲಲ್ಲಿ ಸುಮ್ನೇ ಕಾಯೋದು ಅಷ್ಟು ಇಷ್ಟಾನಾ? ಅಲ್ಲ ಯಾವ್ ದಾರಿ ಹಿಡೀಲಿ ಅನ್ನೋ ಕನ್ಫ್ಯೂಶನ್ನಾ?
ಎಲ್ಲಿ ಹೋದ್ರೂ ಸರ್ಕಲ್ಲು,ಸಿಗ್ನಲ್ ಸಿಕ್ಕೇ ಸಿಗುತ್ತೆ. ಒಂದ್ ದಾರಿ ಹಿಡ್ಕೊ0ಡು ಸುಮ್ನೇ ಹೋಗ್ತಾ ಇರೋದು...!! ಅದು ಜೀವನ.

ನಾವಡ ಹೇಳಿದರು...

ಬಿಂಬಗಳು ಚೆನ್ನಾಗಿವೆ
ನಾವಡ

ಶ್ರೀನಿಧಿ.ಡಿ.ಎಸ್ ಹೇಳಿದರು...

ಶ್ರೀನಿಧಿ- ಬಿಟ್ ಬಿಡಯ್ಯಾ!:) ಯಾವ್ದೋ ಕೆಟ್ ಘಳಿಗೇಲಿ ಬರ್ದಿದ್ದು:D

ಅರುಣ - ನಿಮ್ ಕಮೆಂಟು ಶ್ರೀನಿಧಿದ್ಕಿಂತ ಓಕೆ:)

ಸಂದೀಪ- ಹೌದಲೇ, ಎಂತಾ ಮಾಡಲೂ ಬರದಿಲ್ಲೆ!

ಶಾಂತಲಾ ಭಂಡಿ- ಕೃತಜ್ಞ!

ಮೃಗನಯನೀ- ಹೌದೌದು ನೀನೇ!:D

ಶ್ಯಾಮಾ- ಹಾಂಗರೆ ಬರಿ ಮತ್ತೆ!

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶ್, ಎಂತಕೆ ಇಂಥಾ ಕಮೆಂಟು?!!

ಜೋಗಿ ಸಾರ್, ಥ್ಯಾಂಕ್ಸು:)

ಸೀಮಾ, ಧನ್ಯ!

ಅತ್ಗೇ,ಏನೋ ತೋಚಿದ್ ಬರ್ದಿದ್ದು...

ಶ್ರೀ, ನೀವ್ ಹೇಳಿದ್ ವಿಷ್ಯ ಕರೆಕ್ಟು! ಆದ್ರೆ ಈ ಮನ್ಸು ಸ್ವಲ್ಪ ತಿಕ್ಲು ನೋಡಿ, ಎಲ್ಲ ಗೊತ್ತಿದ್ದೂ ಏನೇನೋ ಯೋಚ್ನೆ ಮಾಡತ್ತೆ!

ನಾವಡರೇ, ಹೀಗೇ ಬರುತ್ತಿರಿ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶ್, ಎಂತಕೆ ಇಂಥಾ ಕಮೆಂಟು?!!

ಜೋಗಿ ಸಾರ್, ಥ್ಯಾಂಕ್ಸು:)

ಸೀಮಾ, ಧನ್ಯ!

ಅತ್ಗೇ,ಏನೋ ತೋಚಿದ್ ಬರ್ದಿದ್ದು...

ಶ್ರೀ, ನೀವ್ ಹೇಳಿದ್ ವಿಷ್ಯ ಕರೆಕ್ಟು! ಆದ್ರೆ ಈ ಮನ್ಸು ಸ್ವಲ್ಪ ತಿಕ್ಲು ನೋಡಿ, ಎಲ್ಲ ಗೊತ್ತಿದ್ದೂ ಏನೇನೋ ಯೋಚ್ನೆ ಮಾಡತ್ತೆ!

ನಾವಡರೇ, ಹೀಗೇ ಬರುತ್ತಿರಿ.

Madhu ಹೇಳಿದರು...

Search in kannada by typing in kannada.

http://www.yanthram.com/kn/

Add kannada search to your blog with onestep.

http://kannadayanthram.blogspot.com

Add Kannda Search to your iGoogle page.

http://www.google.com/ig/adde?hl=en&moduleurl=http://hosting.gmodules.com/ig/gadgets/file/112207795736904815567/kannada-yanthram.xml&source=imag