ಶನಿವಾರ, ಫೆಬ್ರವರಿ 16, 2008

ಜಂಗಮ ಬಿಂಬಗಳು -೩

ಅವನು ಬೈಕಿನ ಹಿಂದೆ ಬರೆದುಕೊಂಡಿದ್ದ - "ಐ ಡೋಂಟ್ ಕೇರ್"ಅಂತ. ಒಂದು ದಿನ ಬ್ಯಾಂಕಿನವರು ಬಂದು ಬೈಕು ಎತ್ತಿಕೊಂಡು ಹೋದರು. ಮೂರು ನಾಲ್ಕು ತಿಂಗಳಿಂದ ಸಾಲದ ಕಂತು ಕಟ್ಟಿರಲಿಲ್ಲವಂತೆ.

****

ಆತನಿಗೆ ಕೆಲದಿನಗಳ ಕಾಲ ಮುಖವಾಡ ಧರಿಸಿ ಬದುಕಬೇಕು ಅನ್ನುವ ಆಸೆಯಾಯಿತು. ಧರಿಸಿದ. ಎಷ್ಟೋ ದಿನಗಳ ನಂತರ ಮುಖವಾಡ ತೆಗೆಯಬೇಕನಿಸಿತು. ತೆಗೆದ. ಮುಖವಾಡದ ಜೊತೆಗೆ ಮುಖವೂ ಕಿತ್ತು ಬಂತು.

****

11 ಕಾಮೆಂಟ್‌ಗಳು:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿ...
ಎರಡೂ ಬಿಂಬಗಳೂ ಚೆನ್ನಾಗಿವೆ. ತುಂಬಾ ನೋವನ್ನು ತುಂಬಿಕೊಂಡು ಸೊಕ್ಕಿನಿಂದ ನಡೆವ ಸಾಲುಗಳು. ಇಷ್ಟವಾದ್ವು.

ಅನಾಮಧೇಯ ಹೇಳಿದರು...

ಪುಣ್ಯಕ್ಕೆ ಮುಖವಾಡ ತೆಗದ ಮಕವೂ ಬಂತು. ಇನ್ನು ಬ್ಯಾರೆ ಯೆಂತರ ತೆಗದಿದ್ರೆ ಯೇನ್ತೆಂತ ಬರಕಾಗಿತ್ತ...ಅಯ್ಯೋ ನಾ ಅದನ್ನ ಹೇಳಲಾರೆ......

ಶಬಾಶ....ಬೆಸ್ಟ್ ಬರದ್ದೆ.

ಅನಾಮಧೇಯ ಹೇಳಿದರು...

ಎರಡನೆ ಹನಿಗಥೆ ತೀರ ಗಂಭೀರ. ಚೆಂದದ ಪ್ರಯತ್ನ
-ಚೇತನಾ ತೀರ್ಥಹಳ್ಳಿ

ಅನಾಮಧೇಯ ಹೇಳಿದರು...

nimma eraDu biMbagaLu tuMba chennaagide

ಅನಾಮಧೇಯ ಹೇಳಿದರು...

ನಿಮ್ಮ ಎರಡು ಬಿಂಬಗಳು ತುಂಬ ಚೆನ್ನಾಗಿದೆ

Sridhar Raju ಹೇಳಿದರು...

shreenidhi...first bimba artha aaglilla.....
second one super...

Parisarapremi ಹೇಳಿದರು...

ಹೆಗ್ಡೆ ಹೇಳಿದ್ದನ್ನು ನಾನು ಎಸ್ಸೆಮ್ಮೆಸ್ಸಲ್ಲೇ ಕಳಿಸಿದ್ದೆ.. :-)

Pramod P T ಹೇಳಿದರು...

ಮೊದಲ ಬಿಂಬ ಹಾಸ್ಯಮಯ(!?)ವಾಗಿದ್ದರೆ, ಎರಡನೆಯದು ಅರ್ಥಗರ್ಭಿತವಾಗಿದೆ!

ಸುಧನ್ವಾ ದೇರಾಜೆ. ಹೇಳಿದರು...

ಮೇಲಿರುವ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ಹುಷಾರಾಗಿರು ಶ್ರೀನಿಧಿ.

sunaath ಹೇಳಿದರು...

ಜಂಗಮ ಬಿಂಬಗಳು ಮನಸ್ಸನ್ನು ಕಲಕುತ್ತವೆ. Keep feeding us.

Shree ಹೇಳಿದರು...

ಬಹುಶ ಬೈಕಿಂದ ಬಿದ್ದಾಗ್ಲು ಅವನು ಐ ಡೋಂಟ್ ಕೇರ್ ಆಂದಿರ್ಬೇಕಲ್ಲ!!! :)