ಶುಕ್ರವಾರ, ಮೇ 18, 2007

ಎರಡು ನನ್ನದಲ್ಲದ ಬರಹಗಳ ಬಗ್ಗೆ.

ಇಂದು ಮಧ್ಯಾಹ್ನ ಊಟ ಮಾಡಿ ಸುತ್ತುತ್ತಿದ್ದೆ, ತಂಗಿಯ ಮೆಸೇಜು ಬಂತು. ಅವಳು ಸುಖಾ ಸುಮ್ಮನೆ ಫಾರ್ವರ್ಡುಗಳನ್ನ ಕಳಿಸುವುದಿಲ್ಲವಾದ್ದರಿಂದ, ಏನಿರಬಹುದು ಅಂತ ತೆಗೆದು ನೋಡಿದೆ, ಒಂದು ಕವನ ಇತ್ತಲ್ಲಿ. ಬಹು ದಿನದ ಮೇಲೆ ಒಂದು ಗಟ್ಟಿ ಪುಟ್ಟ ಹನಿ ಓದಿದೆ.

ಚಡಪಡಿಕೆ.

ಮೌನವಾಗುಳಿವ ಶಿಲೆಯೊಳಗೆ
ಅಗಣಿತ ನೆನಪ ಭ್ರೂಣಗಳು
ಅಡಗಿ ಕುಳಿತಿವೆ;
ಶಿಲಾಬಾಲಿಕೆಯ
ಗರ್ಭಕೋಶದ ಒಳಗೆ ದಿನ ತುಂಬಿರಲೂ
ಹೆರಿಗೆಯಾಗದೆ,
ಚಡಪಡಿಸುವ ಇತಿಹಾಸಗಳಿವೆ.

ಬರೆದಿದ್ದು ಗೀತಾ ಶೆಟ್ಟಿ, ತುಪ್ಪೆ.

*********************************

ಗೆಳೆಯ ಚಿನ್ಮಯ, ಇಂಟರ್ನೆಟ್ಟು ಗೀಳಿನಾತ . ಇಡೀ ದಿನ ಪುರಸೊತ್ತು ಇತ್ತೆನ್ನಿ ಅವನಿಗೆ, ಒಂದಲ್ಲ ಒಂದು ಉಪಯುಕ್ತ ಮಾಹಿತಿಯ ಕೊಂಡಿಯನ್ನ ಕಳುಹಿಸುತ್ತಲೇ ಇರುತ್ತಾನೆ. ಇವನೇನಾದರೂ ಲಿಂಕು ಕಳುಹಿಸಿದರೆ ಉಪೇಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವುದೋ ಒಳ್ಳೇ ಬ್ಲಾಗು, ಬರಹ, ಸರಳ ಅರ್ಥವಾಗೋ ಸೈನ್ಸು ಏನಾದರೂ ಬರುತ್ತದೆ ದಿನವೂ, ಅವನ ಕಡೆಯಿಂದ. ನಿನ್ನೆ ತನ್ನ ಎಂದಿನ ಶೈಲಿಯಲ್ಲಿ, "ದೊಸ್ತಾ ಒಂದು ಮೈಲ್ ಕಳ್ಸಿದ್ದಿ ನೋಡಲೇ" ಅಂದ. ಅವನು ಕಳಿಸಿದ್ದು, ಕನ್ನಡ ಪದ್ಯವೊಂದರ ಇಂಗ್ಲೀಷು ಅನುವಾದ! ಚಲನ ಚಿತ್ರ ಗೀತೆಗಳ ಅನುವಾದಕ್ಕೆ ಅಂತಲೇ ಒಂದು ವೆಬ್ ಸೈಟ್ ಇದೆ ಅಂತ ನಂಗೆ ಗೊತ್ತಾದ್ದೇ ನಿನ್ನೆ!
ಅವನು ಕಳುಹಿಸಿದ್ದು ಯಾರೋ ಮಾಡಿದ, ನಮ್ಮ ಅಮೃತಧಾರೆ ಸಿನಿಮಾದ, "ಹುಡುಗಾ ಹುಡುಗಾ" ಪದ್ಯದ ಅನುವಾದ. ಇಂಗ್ಲೀಷು ಅನುವಾದ ಮಾಡಿದವರ ಪಾದದ ಜೆರಾಕ್ಸು ನಂಗೆ ಅರ್ಜೆಂಟಾಗಿ ಬೇಕು.

ಮೂಲ ಪದ್ಯ:

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ದುಮಾಡೊಕು ಕಂಜೂಸು ಬುದ್ದಿ ಬೇಕಾ?
ಹನಿಮೂನಲ್ಲು ದ್ಯಾನ ಏಕಾಂತದಲ್ಲೂ ಮೌನ
ಏನೊ ಚಂದ ಹತ್ತಿರ ಬಾ ಹುಡುಗ

ಮುತ್ತಿನ ಹೊದಿಕೆ ಸುತ್ತಲು ಹೊದಿಸಿ ಅಪ್ಪಿಕೊ ಬಾರೋ ನನ್ನನ್ನ
ಚುಮುಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೊ ನನ್ನನ್ನ
ಕತ್ತಲೆ ಒಳಗೆ ಕಣ್ಣಾಮುಚ್ಚಾಲೆ ಅಪ್ಪಿಕೊ ಬಾರೊ ನನ್ನನ್ನ
ಉರುಳಿಸು ಬಾರೊ ಕೆರಳಿಸು ಬಾರೊ ಅರಳಿಸು ಬಾರೊ ನನ್ನನ್ನ ಹುಡುಗ
show me love show me life
show me everything in life
take me on a holiday
show me something everyday
make me smile and make me smile
make me smile for a while
make my dreams come to live
show me how you love ur wife

ನಾಳೆಯ ಮಾತು ಯಾರಿಗೆ ಬೇಕು ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಧುವನು ಹೀರಿ
ದಾಹವ ನೀಗಿ ಸುಖಿಸೋಣ
ಊರನು ಬಿಟ್ಟು ಊರಿಗೆ ಬಂದು ಪ್ರೀತಿಯ ತೇರನು ಏಳೆಯೋಣ
ಮದುವೆಯು ಆಯ್ತು ಮನೆ ಒಂದಾಯ್ತು ಮುದ್ದಿನ ಮಗುವನು ಪಡೆಯೋಣ.

ಇಂಗ್ಲೀಷು ಅನುವಾದ:

Boy oh boy, my sweet boy.
Do u need stingy mind to love me?..
Meditation in honeymoon, Silence in privacy.
This is not fair, oh boy, come near me boy.(2)

In this winter, put a blanket around and hug me.
In this cold cold winter, come make me warm.
Play hide and seek in the darkness with me and come hug me.
Come make me tumble and twist come make me turn.
(Boy oh boy, my sweet boy. . . . )

Show me love, show me life,
show me everything u like.
Take me on a holiday, show me something everyday.
Make me smile and make me smile, make me smile for a while.
Make my dreams come to life, show me how u life ur wife.
Who wants romantic talks,
we ll start loving from now on.
We ll jump on bed,
taste the nectar and satisfy ourselves.

We ll go from place to place and establish our love there.
We got married, got a home too, now we ll have a cute kid.
(Boy oh boy, my sweet boy. . . . )

ಭಾವನೆಗಳೇ ಇಲ್ಲದೆ ಲಾಯರು ಆಫೀಸಿನಲ್ಲೋ,(ಈ ಮಾತು ಸುಶ್ರುತನಿಗೆ ಅನ್ವಯಿಸುವುದಿಲ್ಲ)ಅಥವಾ ಯಾವುದೋ ಗವರ್ಮೆಂಟು ದಫ್ತರಿನಲ್ಲೋ ಕೆಲಸ ಮಾಡುವವರು ಬರೆದಂತಿರುವ ಈ ಅನುವಾದ ಓದಿ ಹೊಟ್ಟೇ ತುಂಬಾ ನಕ್ಕೆ, ಚಿನ್ಮಯಂಗೆ ಥ್ಯಾಂಕ್ಸು.
ಓದಿದ ನೀವೂ ಅವನಿಗೆ ಧನ್ಯವಾದ ಹೇಳುತ್ತೀರಿ!ನನಗೆ ಗೊತ್ತಿದೆ.

10 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

of course ಧನ್ಯವಾದ ಹೇಳಲೇ ಬೇಕು.
ಶ್ರೀನಿಧಿ ನಮ್ಮ ಮಾತೃ ಭಾಷೆಯಲ್ಲಿ ಭಾವನೆಗಳನ್ನ ಹೊರಚಲ್ಲಿದ ಹಾಗೆ ಬೇರೆ ಭಾಷೆಯಲ್ಲಿ ಹೊರಹೊಮ್ಮಿಸಲೇ ಆಕ್ತಿಲ್ಲೆ. ಇದು ಇಂಗ್ಲೀಷ್ ಮಾತೃಭಾಷೆ ಆಗಿರ್ತಲಾ ಅವರಿಗೆ ಚಲೋ ಅನ್ನಿಸಿಕ್ಕು. ಏನಂತೀರಾ?

ವಿ.ರಾ.ಹೆ. ಹೇಳಿದರು...

ಶ್ರೀ, ಅನುವಾದ , ತಮಾಷೆ ಎಲ್ಲಾ ಸೂಪರ್

ಆದ್ರೆ ನಿನ್ನ ಕೊನೆಯ ಪ್ಯಾರಾ highly offensive.
ನಿನ್ನಿಂದ ಇಂಥದ್ದನ್ನ ನಿರೀಕ್ಷಿಸಿರಲಿಲ್ಲ :(
ಭಾವನೆಗಳೇ ಇಲ್ಲದವರು ಐ.ಟಿ ಕಂಪನಿನಲ್ಲೂ ಇರ್ತಾರೆ. ನಿಜ ಹೇಳ್ಬೇಕು ಅಂದ್ರೆ ಅಲ್ಲೇ ಜಾಸ್ತಿ.ಆತರ ನಿರ್ದಿಷ್ಟ ಕೆಲಸದ ಜಾಗಗಳನ್ನು ಹೇಳಿರುವುದೆ ಭಾರಿ ತಪ್ಪು. ಹೇಳಿಕೆ ವಾಪಸ್ ತಗಂಡು ಬೇಷರತ್ತಾಗಿ ಕ್ಷಮೆ ಕೋರುವ ಜವಾಬ್ದಾರಿ ನಿನ್ನ ಮೇಲಿದೆ.

Sushrutha Dodderi ಹೇಳಿದರು...

ವಿಕಾಸ್ ಹೆಗ್ಡೆಯವರು ಹೇಳಿರುವುದು ಸರಿ ಇದೆ. 'ಭಾವನೆಗಳೇ ಇಲ್ಲದಿರುವವರು' ಎಂದು quote ಮಾಡುವುದನ್ನು ನಾನು serious ಆಗಿ object ಮಾಡುತ್ತೇನೆ (ನಾನು ಈ ಕೆಟಗರಿಗೆ ಸೇರುವುದಿಲ್ಲ ಎಂದು ನೀನು ಹೇಳಿದ್ದರೂ!). ಆದಷ್ಟು ಬೇಗ ಈ ತಪ್ಪಿಗೆ ಸಾರ್ವಜನಿಕವಾಗಿ ನೀನು ಕ್ಷಮೆ ಯಾಚಿಸಿದರೆ ಒಳಿತು. ಅದಿಲ್ಲದಿದ್ದರೆ ನಿನ್ನ ಮೇಲೆ ವಕೀಲರ ಸಂಘದ ವತಿಯಿಂದ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತಿಸಲಾಗುವುದು. :)

ಇಷ್ಟಾಗ್ಯೂ ಆ ಮೊದಲ ಕವನ ಮತ್ತು ಹುಡುಗ ಹುಡುಗ ಹಾಡು ಚೆನ್ನಾಗಿದೆ. :)

Lanabhat ಹೇಳಿದರು...

:O (ಮೇಲಿನೆರಡು ಕಮೆಂಟ್ ನೋಡಿ)
ಕೆಲವೊಮ್ಮೆ ಹೀಗಾಗುತ್ತದೆ ಅನುವಾದಿಸುವವರು ಸ್ವಲ್ಪ ಚಿಂತಿಸಬೇಕು ಅನಿಸುತ್ತದೆ ..

ಅನಿವಾಸಿ ಹೇಳಿದರು...

ಶಿಲಾಬಾಲಿಕೆಯ ಕುರಿತು ಹೆಣ್ಣೊಬ್ಬಳು ಮಾತ್ರ ಬರೆಯಬಲ್ಲಂತ ದಟ್ಟ ಕವನಕ್ಕಾಗಿ ನಿಮ್ಮ ತಂಗಿ ಗೀತಾ ಶೆಟ್ಟಿಯವರಿಗೆ ದಯವಿಟ್ಟು ಅಭಿನಂದನೆಗಳನ್ನು ತಿಳಿಸಿ. ಮೌನ-ಶಿಲೆ. ಗರ್ಭ-ಹೆರಿಗೆ. ಚಡಪಡಿಕೆ-ಇತಿಹಾಸ. ಯೋಚಿಸುತ್ತಲೇ ಇದ್ದೇನೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

@ರಂಜು,
ಎಂತೇನ ಮಾರಾಯ್ತಿ!! ಗೊತಾಗ್ತಲ್ಲೆ:)

@ ವಿಕಾಸ್,ಸುಶ್
ನನ್ನ ಉದ್ದೇಶ ಅವರುಗಳನ್ನ hurt ಮಾಡೋದಲ್ಲ! ಸುಮ್ನೆ ಉದಾಹರಣೆ ಕೊಟ್ಟೆ! ಓಕೆ, IT ಕಂಪನಿಯವರನ್ನೂ ಸೇರಿಸಿಕೊಂಡು ಓದಬೇಕಾಗಿ ವಿನಂತಿ. :)

ಶ್ರೀನಿಧಿ.ಡಿ.ಎಸ್ ಹೇಳಿದರು...

@ lana,

ಹಮ್, ಸತ್ಯ..

ಅನಿವಾಸಿ,
ನನ್ನ ತಂಗಿ ಹೆಸರು ಶ್ರೀಕಲಾ,ಅವಳು ಕವನ ಕಳಿಸಿದ್ದು- ಗೀತಾ ಶೆಟ್ಟಿಯವರದು :)

ಸಿಂಧು sindhu ಹೇಳಿದರು...

ಗೀತಾ ಶೆಟ್ಟಿಯವರ ಕವಿತೆ ಒಂದು ಚಂದ ಪುಟ್ಟ ಅಚ್ಚರಿ. ಚಡಪಡಿಸುವ ಇತಿಹಾಸ.. ಗಾಢವಾಗಿ ಕಾಡುವ ಪ್ರತಿಮೆ..!
ತಂಗಿ ಶ್ರೀಕಲಾಗೆ ಮತ್ತು ಇಲ್ಲಿ ಹಂಚಿದ ನಿಮಗೆ ಧನ್ಯವಾದಗಳು..

ಹುಡುಗಾ ಹುಡುಗಾ ಇಡೀ ಹಾಡನ್ನು ಇಂಗ್ಲಿಷಲ್ಲೆ ನಮ್ಮ ಕನ್ನಡದ ಚಿತ್ರಕವಿಗಳು ಬರೆದಿದ್ದರೆ ಅನುವಾದದ ಕಷ್ಟವೇ ತಪ್ಪುತ್ತಿತ್ತು. :)

ಕೆಟಗರೈಸೇಶನ್ ತಪ್ಪು.. ಆದ್ರೆ ಎಲ್ಲರಲ್ಲೂ ಪೂರ್ವಾಗ್ರಹಗಳೂ ಸಹಜ.. ಹೆಚ್.ಆರ್‍ ನವರು ಇಷ್ಟು ಚೆನ್ನಾಗಿ ಭಾವಲಹರಿಗಳನ್ನು ತೇಲಿಬಿಡುತ್ತಾರೆ ಅಂತ ನಂಗೆ ಗೊತ್ತಾಗಿದ್ದೆ ನಿಮ್ಮ ಬ್ಲಾಗೋದಿದ ಮೇಲೆ. :)

ಪ್ರೀತಿಯಿರಲಿ
ಸಿಂಧು

ಸಂತೋಷಕುಮಾರ ಹೇಳಿದರು...

ಚಿನ್ಮಯಿಯ ಉಳಿದ ಗೀಳುಗಳ ಬಗ್ಗೆಯು ಬರೆದಿದ್ದರೆ ಚೆನ್ನಾಗಿರ್ತಿತ್ತು...

Sandeepa ಹೇಳಿದರು...

ಅನುವಾದ ಎಷ್ಟು ಚೆನ್ನಾಗಿದೆಯೆಂದರೆ,
ಎರಡು ಸಾಲು ದಾಟಿ ಮುಂದೆ ನನಗೆ
ಓದಲೇ ಆಗಲಿಲ್ಲ!!