ಗುರುವಾರ, ಮೇ 31, 2007

ಅಸಂಗತ

ಅರ್ಧ ಚಂದ್ರ ಕಾಣುತ್ತಿದ್ದಾನೆ,
ನೆತ್ತಿ ಬೋಳಾದ
ಮರದ ಎಡೆಯಿಂದ.
ನನಗೆ ಈಗೀಗ ಕಣ್ಣು ಸರಿ ಕಾಣುತ್ತಿಲ್ಲ,
ವರುಷ ಸುಮಾರಾಯಿತು.

ಮೋಟು ಕಾಂಪೌಂಡಿನೊಳಗೆ
ಹರುಕು ಕುರ್ಚಿ.
ಹರಿದ ಪೇಪರಿನೊಳಗೆ
ಏನೋ ಸುದ್ದಿ.
ರಸ್ತೆ ತುಂಬೆಲ್ಲ ಕಸ ತುಂಬಿಕೊಂಡಿದೆ.
ಬೀದಿಯಂಚಿನ ಮುದುಕ
ನಿನ್ನೆ ತೀರಿಕೊಂಡ.

ಮನೆಯೊಳಗೆ ಏನೋ ಗೊಣಗಾಟ,
ತಿಳಿಯುತ್ತಿಲ್ಲ, ಯಾಕೆಂದು.
ನಮ್ಮ ಮನೆಯೆದುರಿನ
ದೀಪವೇ ಹತ್ತಿಕೊಂಡಿಲ್ಲ,
ಬೇರೆಲ್ಲ ಕಡೆ ಬೆಳಕು.

ಮೆಟ್ಟಿಲು ಹತ್ತಬೇಕು
ಒಳಗಡೆಗೆ ನಡೆಯಲು
ಕಸುವಿಲ್ಲ,
ಹೋಗದೆ ವಿಧಿಯಿಲ್ಲ..
ಕತ್ತಲೆಂದರೆ ಹೆದರಿಕೆ ನನಗೆ.

9 ಕಾಮೆಂಟ್‌ಗಳು:

ಸುಪ್ತದೀಪ್ತಿ suptadeepti ಹೇಳಿದರು...

ಈ ಅಸಂಗತದಲ್ಲೂ ಒಳ್ಳೆಯ ಸಂಗತಿಯನ್ನೇ ಅಡಗಿಸಿದ್ದೀರಿ. ತೆರೆಮರೆಯ ಚಿತ್ರಣದಂತೆ... ಮಂಜು ಹಾಸಿನಡಿಯ ಮಲೆನಾಡಿನಂತೆ...

ಅನಾಮಧೇಯ ಹೇಳಿದರು...

ನಮ್ಮ ಮನೆಯೆದುರಿನ
ದೀಪವೇ ಹತ್ತಿಕೊಂಡಿಲ್ಲ,
ಬೇರೆಲ್ಲ ಕಡೆ ಬೆಳಕು....ಭಯವಾಗುತ್ತೆ ರೀ ಈ ಸಾಲು ಓದಿದರೆ
ಆದರೆ ಇಂತಹ ಅಸಂಗತಗಳು ಆಕರ್ಷಿಸುತ್ತವೆ. ಏನೂ ಕಂಡು ಕಾಣದ ಭಾವ

Parisarapremi ಹೇಳಿದರು...

ರೀ, ಲೈಟ್ ಬಿಲ್ ಸರಿಯಾಗಿ ತಿಂಗಳಾ ತಿಂಗಳಾ ಕಟ್ರೀ.... ಎಲ್ಲಾ ಸರಿ ಹೋಗುತ್ತೆ!!

ಮನಸ್ವಿನಿ ಹೇಳಿದರು...

ಎಷ್ಟು ಭಾವಗಳಿವೆಈ ಹಾಡಿನಲ್ಲಿ! ಓದಿದಂತೆ ಬೇರೆ ಬೇರೆಯ ಭಾವ...ಏನನ್ನು ಮನದಲ್ಲಿಟ್ಟುಕೊಂಡು ಈ ಹಾಡನ್ನು ಬರೆದಿರುವೆ?

Shiv ಹೇಳಿದರು...

ಶ್ರೀನಿಧಿ,

ಒಂದೊಂದು ಸಲ HRನವರಿಗೆ ಎನೋ ಆಗುತ್ತೋ ಗೊತ್ತಿಲ್ಲಾ ನೋಡು :)

ಭಯನಕವೆನಿಸುತ್ತೆ ಅಸಂಗತ..ಆದರೆ ಅಸಂಗತದಲ್ಲೂ ಎಲ್ಲೋ ನಿಜದ ಬಿಂಬವಿದೆ

ಶ್ರೀನಿಧಿ.ಡಿ.ಎಸ್ ಹೇಳಿದರು...

suptadeepti,
ಮಂಜು ಹಾಸಿನಡಿಯ ಮಲೆನಾಡಿನಂತೆ! ಎಂತ ಚಂದ ಮಾತಂದಿರಿ! ಧನ್ಯ!

ಮಲ್ನಾಡ್ ಹುಡ್ಗಿ,
ಭಯ ಆಗೋದು ಏನಿದೆ ಅದ್ರಲ್ಲಿ? ಬಂದಿದ್ದು ಬಂದ್ ಹಾಗೆ ಸ್ವೀಕರಿಸೋದು ಅಷ್ಟೆ!

ಪರಿಸರಪ್ರೇಮಿಗಳೇ,
ನಿಮ್ಮ ಸಲಹೆಯನ್ನ ಗಂಭೀರವಾಗಿ ಪರಿಗಣಿಸಲಾಗುವುದು!:)

ಮನಸ್ವಿನಿ,
ಹಮ್, ನೀನೇ ಹೇಳಿದೆಯಲ್ಲ -
"ಎಷ್ಟು ಭಾವಗಳಿವೆಈ ಹಾಡಿನಲ್ಲಿ!" ಅಂತ! ಭಾವಗಳು ಹಲವಿವೆ ಇಲ್ಲಿ.:)

ಶಿವ್,
ಹಮ್, HR ಅಗಿದ್ದಕ್ಕೇ ಹೀಗೆಲ್ಲ ಬರಿತೀನೋ ಏನೋ!:)

ಅನಾಮಧೇಯ ಹೇಳಿದರು...

chennagide. kela saalugalu hala bhaavagalu

Sandeepa ಹೇಳಿದರು...

keep it up!

MD ಹೇಳಿದರು...

ಶ್ರೀ, ಮೊನ್ನೆ ಓದಿದಾಗ ಬೆರೆಯದೇ ರೀತಿಯಲ್ಲಿ ತಿಳಿದಿತ್ತು. ಇವತ್ತು ಮತ್ತೊಮ್ಮೆ ಓದಿದರೆ ಹಿಂದಿನ ಸಾರಿ ತಿಳಿದಿದ್ದಕ್ಕೆ ತದ್ವಿರುಧ್ಧವಾಗಿ ತಿಳಿಯಿತು.
ಯಾವುದು ಸರಿಯಾದುದೋ ತಿಳಿಯದು. ನೀನು ಬರೆಯುತ್ತಿರುವಾಗ ಪರಿಗಣಿಸಿದ ಭಾವವಾದರೂ ತಿಳಿಸು.