ಸೋಮವಾರ, ಅಕ್ಟೋಬರ್ 16, 2006

ಹಾರಯಿಕೆ.

ಕಪ್ಪೆ ಚಿಪ್ಪಾಗು ಹುಡುಗಿ ನೀ..
ಅಡಗು ಅದರೊಳಗೆ..
ತಡೆಯುವುದಿಲ್ಲ ನಾನು.
ನಿನ್ನಿಷ್ಟ, ನಿನ್ನದೇ ಬದುಕು!
ನನ್ನದೊಂದು ಪುಟ್ಟ
ವಿನಂತಿಯಿದೆ
ಅಷ್ಟೆ..
ಚಿಪ್ಪಾಗಲು ಹೊರಡುವ ಮುನ್ನ,
ಜೊತೆಯಲಿ ಸೇರಿಸಿಕೋ
ಸ್ವಾತಿಯ ಮಳೆ ಹನಿಯೊಂದ...
ಸಮಯ ಕಳೆದು,
ಚಿಪ್ಪು
ಬಿರಿವಾಗ
ಮುತ್ತಿರಬಹುದು
ಅಲ್ಲಿ!

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Good one.....

ಅನಾಮಧೇಯ ಹೇಳಿದರು...

Good One....Very meaningfull....
i appreciate it:-):-)
continue writing .....

Sushrutha Dodderi ಹೇಳಿದರು...

Simply superb! ತುಂಬಾ ಇಷ್ಟ ಆಯ್ತು.

ಶ್ರೀನಿಧಿ.ಡಿ.ಎಸ್ ಹೇಳಿದರು...

ಧನ್ಯವಾದಗಳು,
ತೃಪ್ತಿ, ಸಂತೃಪ್ತಿ ಆಯ್ತಾ?:)
ಸುಶ್,
ತ್ತ್ಯಾನ್ಕ್ಸು! :)