ಶನಿವಾರ, ಅಕ್ಟೋಬರ್ 07, 2006

ಭಾವ-೫

ಷೋಕೇಸಿನೊಳಗಿದ್ದ ಮುದ್ದು ಗೊಂಬೆಗಳನ್ನ ಆಸೆಗಣ್ಣುಗಳಿಂದ ನೋಡುತ್ತಿದ್ದ ಹುಡುಗಿಯನ್ನ ಕಂಡ ಅಂಗಡಿಯಾತನಿಗೆ ಏನನ್ನಿಸಿತೋ, ಒಂದು ಪುಟ್ಟ ಬೊಂಬೆಯನ್ನ ಆಕೆಯ ಕೈಲಿಟ್ಟು, ಕೆನ್ನೆ ತಟ್ಟಿ ಕಳುಹಿಸಿದ. ಬದುಕು ಸುಂದರವಾಗಿದೆ, ಅಲ್ಲವೆ?

1 ಕಾಮೆಂಟ್‌:

Annapoorna Daithota ಹೇಳಿದರು...

ಅಂಗಡಿಯಾತ ತನಗೆ ಕೊಟ್ಟ ಆ ಗೊಂಬೆಯನ್ನು ಮುದ್ದಿನಿಂದ ಎದೆಗವುಚಿಕೊಂಡು ತನ್ನ ಗುಡಿಸಲಿಗೆ ಬಂದ ಆ ಹುಡುಗಿ, ತೊಟ್ಟಿಲಲ್ಲಿ ಕೈಕಾಲಾಡಿಸುತ್ತಾ ಮಲಗಿರುವ ತನ್ನ ಪುಟ್ಟ ತಂಗಿಯ ಬಳಿ ಆ ಗೊಂಬೆಯಿಟ್ಟು ಕೈ ತಟ್ಟಿ ಕಿಲಕಿಲ ನಕ್ಕಿತು... ಬದುಕು ಬಹಳ ಸುಂದರವಾಗಿದೆ ಶ್ರೀನಿಧಿ :-)