ಬುಧವಾರ, ಅಕ್ಟೋಬರ್ 18, 2006

ದೀಪಾವಳಿಗೊಂದು ಪುಟ್ಟ ಕವನ...

ಕಾರ್ತಿಕನು ಬರುತಿಹನು,
ಮಾಸಗಳ ಮನೆಯೊಳಗೆ
ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ

ಕತ್ತಲನು ಓಡಿಸುವ,
ದೀವಿಗೆಯೂ ಜೊತೆಯಿಹುದು
ಜ್ನಾನ ದೀಪವನೆಲ್ಲ ಹಚ್ಚ ಬನ್ನಿ

ದಾರಿ ಬಿಡಿ ಆತನಿಗೆ,
ಮನದ ಕದವನು ತೆರೆದು
ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ..

4 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ದೀಪಾವಳಿಯ ದೀವಿಗೆ "ಜ್ಞಾನದೀಪ"ವಾಗಬಲ್ಲುದಾದರೆ why not? ಹಚ್ಚೋಣ ಬನ್ನಿ. ಕಾರ್ತೀಕನಿಗೆ ಸುಸ್ವಾಗತಂ!

ಅರೇಹಳ್ಳಿ ರವಿ ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅರೇಹಳ್ಳಿ ರವಿ ಹೇಳಿದರು...

ಕವನ ಸರಳ ಮತ್ತು ಸುಂದರವಾಗಿದೆ...

ನವ್ಯಕ್ಕೆ ಅಂಟಿಕೊಳ್ಳದಿದ್ದರೆ ನಿಮ್ಮಿಂದ ಒಳ್ಳೆಯ 'ಕವಿ'ಯನ್ನು ನಿರೀಕ್ಷಿಸಬಹುದು......

ಸಾಫ್ಟ್‌ವೇರ್ ಎಂಜಿನೀಯರುಗಳು ಇತ್ತೀಚೆಗೆ ತಮ್ಮ ಸಾಫ್ಟ್ ಸಾಫ್ಟ್ ಕಥೆ,ಕವನಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ........
ಇಂಥಹ ಸಮುದಾಯ ದೊಡ್ಡದಾಗಲಿ....
ದೀಪಾವಳಿ ಶುಭಾಶಯಗಳು....

ಶ್ರೀನಿಧಿ.ಡಿ.ಎಸ್ ಹೇಳಿದರು...

ರವಿಯವರೆ,
ನಿಮ್ಮ ನಲ್ಮೆಯ ನುಡಿಗಳಿಗಾಗಿ ವಂದನೆಗಳು.