ಸೋಮವಾರ, ಏಪ್ರಿಲ್ 02, 2007

ಒಂದು ಗ-ಪದ್ಯ

ಮೊನ್ನೆ ಸಿಕ್ಕಾತ ಹೇಳಿದ
ಅವನ ಕನಸುಗಳು ಸತ್ತಿವೆಯಂತೆ..
ನನ್ನ ಕೇಳಿಕೊಂಡ,
ನೀನಾದರೂ ನನ್ನ ಕನಸ ಈಡೇರಿಸು ಅಂತ!
ನನಗೆ ನನ್ನ ಗುರಿಯೆ ತಿಳಿದಿಲ್ಲ,
ಕನಸಂತೂ ಮೊದಲೇ ಇಲ್ಲ.
ಇನ್ನು ಯಾರದೋ ಕನಸಿನ ಭಾರ ನಾನೇಕೆ ಹೊರಲಿ?
ಹೇಳಿಬಿಟ್ಟೆ ಅವನ ಬಳಿ ಹಾಗಂತ.

ಬೇಜಾರು ಮಾಡಿಕೊಂಡಂತೆ ಕಾಣಿಸಿತು,
ನನಗೇನು ಬೇಸರವಿಲ್ಲ..
ದಾಕ್ಷಿಣ್ಯಕೆ ಬಸಿರಾದರೆ ಹೆರಲು ಜಾಗವಿಲ್ಲ.
ನಿಮಗೂ ಸಿಗಬಹುದು ನೋಡಿ ಅವನು
ಮನೆಯ ಬಳಿಯ ಕತ್ತಲ ಮೂಲೆಯಲ್ಲಿ,
ಇಲ್ಲವೆ ನಿತ್ಯ ಟೀ ಕುಡಿಯುವ ಹೋಟೇಲಿನಲ್ಲಿ.
ಸ್ವಲ್ಪ ಜಾಗ್ರತೆಯಿರಲಿ, ಅವನು ಬಲು ಚಾಲಾಕಿ,
ವಿನಂತಿಗಿಂತ ದೊಡ್ಡ ಉರುಳು ಬೇರೊಂದಿಲ್ಲ!

4 ಕಾಮೆಂಟ್‌ಗಳು:

Annapoorna Daithota ಹೇಳಿದರು...

chennaaagide :)

Archu ಹೇಳಿದರು...

wonderful :-)

Sushrutha Dodderi ಹೇಳಿದರು...

hm, mooru sala Odidmele sariyaagi arthaathu :)

Shiv ಹೇಳಿದರು...

ಶ್ರೀನಿಧಿ,

ಎಂತಹ ಸತ್ಯದ ಮಾತು !
ವಿನಂತಿಯೆಂಬ ದೊಡ್ಡ ಉರುಳು..

ಕನಸುಗಳು ಯಾವಾಗಿಂದ transferable ಆಗಿವೆಯಂತೆ?