ಊಟಕ್ಕೆ ಹೋಗಿದ್ದೆವು, ನಾನೂ ನನ್ನ ಕೊಲೀಗು ಪ್ರವೀಣ.
ಅವನು ಯಾವುದೋ ಅಂಗಡಿಯ ಬೋರ್ಡು ನೋಡಿ ಗೊಣಗುತ್ತಿದ್ದ.
"ಏನಾಯ್ತೋ " ?
"ಅಲ್ಲಾ, ಆ ಚಿನ್ನದಂಗಡಿ ಬೋರ್ಡು ನೋಡು since 1915 ಅಂತ ಇದೆ! "
"ಅದಕ್ಕೇನೀಗ"?
"ಅಲ್ಲೇ ಪಕ್ಕಹೋಟೇಲಿನ ಬೋರ್ಡು ನೋಡು since 1930 "
"ಅಯ್ಯೋ ಅವರು ಯಾವಾಗ ಹೋಟೇಲು ಶುರು ಮಾಡಿದರೆ ನಿಂಗೇನೋ?"
ಪ್ರವೀಣ ದೊಡ್ಡ ದನಿಯಲ್ಲಿ ಹೇಳಿದ,
"ಅಲ್ಲಾ ದೇಶ ಇಡಿ ಆವಾಗ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ರೆ, ಈ ನನ್ ಮಕ್ಳು, ಪಾಪಿಗಳು
ಚಿನ್ನದಂಗಡಿ, ಹೋಟೇಲು ಅಂತ ದುಡ್ ಮಾಡ್ತಾ ಇದ್ರಲ್ಲಯ್ಯಾ"!!
ನಾನು ಸುಮ್ಮನೇ ಬಂದೆ!! ಅವನ ಜೋಶ್ ನೋಡಿ ಸ್ವಲ್ಪ ಹೆದರಿಕೆ ಆಯ್ತು!
7 ಕಾಮೆಂಟ್‌ಗಳು:
ತಮಾಶೆಯಾದ್ರು ನಿಜ ತಾನೆ ..................
hunappa namma jana haage .... yaar yaara mane kolle hodakondu hodaru ....namanegenu aagilla anta summanirutare .... anada haage
... naanu since 1979 kanppa ...
swatantra bandamele huttiddu ..... :)
mast mast :-)
Its just simple nd true Shreenidi.
adre swatanta horatada bisi tattadantaha kaggadina halligalu remote areas idvalla adakkenantiri?
ಸ್ವಾತಂತ್ರಕ್ಕಾಗಿ ಹೋರಾಟ ಮಾಡೋದಕ್ಕಿಂತ ಮುಂಚೆ ಕೆಲವರು ತಮ್ಮ ಹೊಟ್ಟೆಪಾಡಿನ ಹೋರಾಟ ಮುಖ್ಯ ಮಾಡಿಕೊಂಡಿದ್ದಿರಬಹುದು.
ಆದರೆ ಅದೃಷ್ಟಕ್ಕೆ ಎಲ್ಲರೂ ಹೊಟ್ಟೆಪಾಡಿನ ನೆಪದಲ್ಲಿ ದೇಶನ ಮರೆಯಲಿಲ್ಲ...
ಆ ಒಂದು ಕಿಚ್ಚು ಈಗ ಸಿಗುವುದೇ?
ಹಹಹಹ...
ಸಕ್ಕತಾಗಿದ್ದಪ್ಪ.
-ಯಜ್ಙೇಶ್
lol
ಕಾಮೆಂಟ್ ಪೋಸ್ಟ್ ಮಾಡಿ