ಗುರುವಾರ, ಮೇ 03, 2007

ಅರಿವಿಂದ ಹೊರಗೆ. . .

ಚಕ್ರಕೆ ಪರಿಭ್ರಮಣದಿ ಸವೆವ ಭ್ರಮೆ,
ಸುಖದ ದಾರಿಯಲಿ ಸುತ್ತುವ
ಕನವರಿಕೆ

ಕುದುರೆಗೆ ಧೂಳೆಬ್ಬಿಸುವ ಹುಚ್ಚು
ಓಡುವ ಆತುರದ ಜೊತೆ
ಆಯಾಸದ ಭಯ

ಚಾಟಿಗೆ ಅಶ್ವದ ಮೈಸವರುವ ಚಪಲ!
ಏಟು ಉದ್ದೇಶವಲ್ಲ , ಮತ್ತು
ಎತ್ತಿದ ಕೈ ನೆಪ.

ಸಾರಥಿಗೆ ಖಾಲಿ ಕಣ್ಣುಗಳ ದೃಷ್ಟಿ,
ಎಲ್ಲ ಹಾದಿಯೂ ಒಂದೇ,
ಮನೆಯದನು ಬಿಟ್ಟು.

ಬತ್ತಳಿಕೆಯ ಬಾಣಕ್ಕೆ ಸ್ವಾತಂತ್ರದ ತುಡಿತ
ಶಿಂಜಿನಿಯ ದಾಟಿ ಗಾಳಿ ಸೀಳಿದರೆ,
ನೀಳ ಉಸಿರು.

ಯೋಧನಿಗೆ ಮರೀಚಿಕೆ ಮುಟ್ಟುವ ಗುರಿ
ಬಿರುದು ಹೊರುವಾಸೆ ಸುಪ್ತ
ಅಳುಕು ಬಿಡದು

ನೋಡುವಗೆ ಅಚ್ಚರಿ, ಬೆರಗು, ತಲ್ಲಣ
ನಿಜದಿ ಅಲ್ಲೇನು ಇಲ್ಲ, ಎಲ್ಲ
ಕಾಗದದ ಚಿತ್ರ.

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

"ಅದ್ಭುತ!" ಹೇಳೋಕೆ ಸಾಧ್ಯವಾಗಿದ್ದು ಅಷ್ಟೇ

Shree ಹೇಳಿದರು...

chitradaachegina noTa.. chennaagide!! keep it up.

Shiv ಹೇಳಿದರು...

ಶ್ರೀನಿಧಿ,

ಭ್ರಮೆ-ಹುಚ್ಚು-ಚಪಲ-ದೃಷ್ಟಿ-ತುಡಿತ-ಗುರಿ..
ಎಲ್ಲಾ ಸೇರಿ ಅದು ಒಂದು ಚಿತ್ರ..
ಚಿತ್ರದ ಹಿಂದಿರುವ ಇವೆಲ್ಲಾ ಭಾವನೆಗಳು..
ತುಂಬಾ ಚೆನ್ನಾಗಿ ಬಂದಿವೆ..

ಅನಾಮಧೇಯ ಹೇಳಿದರು...

ನಿಮ್ಮ ಎಲ್ಲ ಸೃಷ್ಟಿಗಳಿಗಿಂತ ಇದು ತುಂಬಾ ಚೆನ್ನಾಗಿದೆ...
ಭಾರವಸೆ, ಆಶ್ಚರ್ಯ, ಕುತೂಹಲ, ನೆಮ್ಮದಿ, ಮನಸ್ಸಿನ ಹುಚ್ಚುಕಾಂಕ್ಷೆಗಳು,ಅಹಂಕರ, ಭೀತಿ.. ಎಲ್ಲದಕ್ಕೂ ಅರ್ಥ ಇದೆ ಎಂದು ಅನ್ ಕೊಳ್ತಾ ಇರೋವಾಗ್ಲೇನೇ... ಇಷ್ಟ್ ಹೊತ್ತುು ಅನುಭವಿಸಿದ್ದೆಲ್ಲ ನಿಮ್ಮ ಮನಸ್ಸಿನ ಭ್ರಮೆ ಅನ್ನುವ ಕವನ.....ಏನು ಹೇಳೋಕ್ ಹೊರ್ ಟಿದಿರಾ ನೀವು????

Pramod P T ಹೇಳಿದರು...

ಕವನದ ಜೊತೆ ತಲೆಬರಹ ಇನ್ನೂ ಸೂಪರ್!
"ಶಿಂಜಿನಿ" ಅಂದರೆ ಏನು?

ಶ್ರೀನಿಧಿ.ಡಿ.ಎಸ್ ಹೇಳಿದರು...

@madhu,
thankx!

@ಶ್ರೀ,
ಧನ್ಯ!:)

@shiv,
ಹಮ್, ಹೀಗೇ, ಏನೋ ಮಾಡುತ್ತಿದ್ದಾಗ sudden ಆಗಿ ಹುಟ್ಟಿದ್ದು ಈ ಕವನ..

@ ಮಲ್ನಾಡ್ ಹುಡ್ಗಿ,
ನಾನು ಏನು ಹೇಳೋಕೆ ಹೊರಟಿದೀನಿ ಅನ್ನೊದಕ್ಕಿಂತ , ನೀವು ಹೇಗೆ ಅರ್ಥ ಮಾಡ್ಕೊಂಡಿದೀರಾ ಅನ್ನೋದು imp:)
@ pramod
ಶಿಂಜಿನಿ- ಬಿಲ್ಲಿನ ಹಗ್ಗ.
ಧನ್ಯ್ವವಾದ ಮೆಚ್ಕೊಂಡಿದ್ದಕ್ಕೆ.

ಸಿಂಧು sindhu ಹೇಳಿದರು...

ಶ್ರೀನಿಧಿ,

ತುಂಬ ಒಳ್ಳೆಯ ಕವಿತೆ.
"ಎಲ್ಲ ಹಾದಿಯೂ ಒಂದೆ..ಮನೆಯದನು ಬಿಟ್ಟು" ನೂರು ಅರ್ಥ ಕೊಡುವ ಸಾಲು.
ಎಲ್ಲ ಸಾಲುಗಳೂ ಅರ್ಥ ಗರ್ಭಿತವಾಗಿವೆ. ಹಲವಾರು ಯೋಚನೆಗಳ ತರಂಗವೆಬ್ಬಿಸುತ್ತವೆ.

ನಿಜವಾಗ್ಲೂ ಅಲ್ಲೇನೂ ಇಲ್ವಾ? ! ನಂಗೆ ಹಾಗನ್ನಿಸುತ್ತಿಲ್ಲ!