ಗುರುವಾರ, ಮೇ 10, 2007

ಒಂದೆರಡು ಹಳೆಯ ಹನಿಗಳು

ನಿನ್ನೆ ಮನೇಲಿ ಧೂಳು ಜಾಡಿಸುವಾಗ ಹಳೆಯ ಡೈರಿ ಸಿಕ್ಕಿತು. ಯಾವಾಗಲೋ, ಅಂದ ಕಾಲತ್ತಿಲೆ ಬರೆದ ಹನಿಗಳು. ಬೈಕೋಬೇಡಿ, ಬಾಲಿಶವಾಗಿದೆ ಅಂತ. ಕ್ಲಾಸಲ್ಲಿ ಕೂತು ಪಾಠ ಕೇಳುತ್ತಿದ್ದಾಗ ಗೀಚಿದವು ಇವುಗಳೆಲ್ಲ.

ಮಾನ

ಯಾಕ್ ಸ್ವಾಮಿಗಳೆ
ನೀವು ಹತ್ತೋದಿಲ್ಲ
ವಿಮಾನ,
"ಉಳ್ಸಬೇಕಲ್ಲಯ್ಯಾ
ನಾವು
ಕಾವೀ
ಮಾನ."

ಈ ಹೊಸಗಾಲದ ಹುಡುಗರ ಇಂಗ್ಲೀಷು ನೋಡಿ ಹಿರಿಯರೊಬ್ಬರು ಬೈಕೊಂಡಿದ್ದು ಹೀಗೆ:
ಮಾತು ಮಾತಿಗೂ
ಗೋ ಯಾ
ಕಮ್ ಯಾ,
ಇವರಿಗೇನು
ಬುದ್ಧಿ
ಕಮ್ಮಿಯಾ?!

ಬದಲಾವಣೆ

ಮದುವೆಯಾಗಿ
ದೊರೆತ ಮೇಲೆ ರಮಣ,
ಹುಡುಗಿ ತೂಗುವಳು
ನೂರು
ಮಣ!

6 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಹಳೆ ಹನಿಗಳು ಚೆನಾಗಿದೆ ..
ಕ್ಲಾಸ್ ಅವಧಿ ಹಿಂಗಾದ್ರೂ ಉಪಯೋಗ ಆಯ್ತಲ್ಲಾ .. ಗುಡ್ :-)

ದುಂಡಿರಾಜ ಅನ್ನೋರೊಬ್ರು ಹಿಂಗೆ ಬರ್ದೂ ಬರ್ದೂ 'ಹನಿಗವಿ' ಅಂತನೇ ಖ್ಯಾತಿ ತಗಂಡಿದಾರೆ ಅಲ್ವಾ?
:-))))

Sandeepa ಹೇಳಿದರು...

ಹನಿಯು ಹಳೆಯದಾದರೇನು..
ದನಿಯು ನವನವೀನ...

ಅನಾಮಧೇಯ ಹೇಳಿದರು...

ಇನ್ನೂ ಜಾಸ್ತಿ ಧೂಳು ಜಾಡಿಸಿ :-) ಮತ್ತಷ್ಟು ಹಳೆಯ ಡೈರಿಗಳು ಸಿಗಲಿ...ಮತ್ತಷ್ಟು ಹನಿಗಳು (ತುಂತುರು ಹನಿಗಳು)ಬೀಳಲಿ...

Annapoorna Daithota ಹೇಳಿದರು...

ಹೌದು... ಈ ಹನಿಗಳು ಡುಂಡಿರಾಜರ ಹನಿಗಳನ್ನು ಜ್ಞಾಪಿಸುತ್ವೆ.......

ಶ್ರೀನಿಧಿ.... ನೀನು ಈ ಕ್ಷೇತ್ರದ (ಬರಹದ) ಎಲ್ಲಾ ಕೋನದಲ್ಲೂ ನಿಸ್ಸೀಮ....
ನಂಗೆ ನಿನ್ನ ಈ ಚಾತುರ್ಯದ ಬಗ್ಗೆ ಅಭಿಮಾನವಿದೆ.

Parisarapremi ಹೇಳಿದರು...

ಹೆ ಹೆ ಹೆ... ಕಾವಿ ಮಾನ.. ಉಳಿಸಲು ವಿಮಾನ ಹತ್ತೋದಿಲ್ವೇನು? ಮರ್ಸಿಡೀಸ್ ಬೇಕಾದರೆ ಹತ್ತುತ್ತಾರೆ..

ಅನಾಮಧೇಯ ಹೇಳಿದರು...

Funny aagive adakke naa annuva ivakke hanigavana!!