ಶುಕ್ರವಾರ, ಸೆಪ್ಟೆಂಬರ್ 15, 2006

~~~ ನನ್ನವಳು ~~~

ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು,
ಕಾರಣವದೇನೆಂದು ಕೇಳಬಹುದೆ?
ತುಟಿಯಂಚ ನಗು ಹಿಂದೆ ಏನದೋ ತುಂಟತನ
ಮನದೊಳಗೆ ಏನಿದೆಯೋ ಅರಿಯಬಹುದೆ..

ಅನುನಯದ ನಡೆ ನುಡಿಯು, ತಣ್ಣನೆಯ ಮಾತುಗಳು
ಹೊಸದೇನೋ ಹುನ್ನಾರ ನಡೆಯುತಿಹುದು
ನಿತ್ಯವೂ ಇಲ್ಲದಿಹ ಬೇರೆಯದೆ ನೋಟವಿದು
ನನಗೇತಕೋ ಶಂಕೆ ಮೊಡುತಿಹುದು

ಹೊಸದು ಸೀರೆಯು ಬೇಕೆ, ಹಬ್ಬ ಸನಿಹದೊಳಿಲ್ಲ
ಅಮ್ಮ ಬರುವಳೆ ತವರು ಮನೆಯಿಂದ
ಚಿನ್ನ್ನದಾ ಸರಕಿನ್ನು ತಿಂಗಳೂ ಕಳೆದಿಲ್ಲ
ವಿಷಯವೇನೆಂದೊಮ್ಮೆ ಹೇಳಿದೊಡೆ ಚೆಂದ.

ಒಳಮನೆಯ ಗೋಡೆಯಲಿ ಕಂದನಾ ಚಿತ್ರಪಟ
ಮೊಗದಳಗದೇನದೋ ಹೊಸಬಗೆಯ ಲಜ್ಜೆ,
ಹೊಸ ಜೀವ ಬರುತಿಹುದೆ ನಮ್ಮ ಈ ಬಾಳೊಳಗೆ
ನಾಲ್ಕಿದ್ದ ಎಡೆಗೆ ಆರಾಗುವುದೆ ಹೆಜ್ಜೆ!

ಓ ಜೀವ ಸಖಿ ನನಗೆ ಮಾತೆ ಹೊರಡುತಲಿಲ್ಲ,
ಆನಂದ, ಆಶ್ಚರ್ಯ ಎದೆ ತುಂಬಿದೆ.
ನಿನ್ನೊಳಗ ಬಾಳ ಕುಡಿ ಚೈತನ್ಯ ತಂದಿಹುದು
ಜೀವನಕೆ ಹೊಸ ಅರ್ಥ ತಾ ಮೊಡಿದೆ.

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

tumba ishta aytu....hige barita iri anta ashistene

Susheel Sandeep ಹೇಳಿದರು...

soopar kavana...*ciM.ci*
ee saalugaLu tuMbAne cennAgi mooDibaMdive..."ArAguva hejje" - padaprayOga iShTavAytu.

"ಹೊಸ ಜೀವ ಬರುತಿಹುದೆ ನಮ್ಮ ಈ ಬಾಳೊಳಗೆ
ನಾಲ್ಕಿದ್ದ ಎಡೆಗೆ ಆರಾಗುವುದೆ ಹೆಜ್ಜೆ!"

Adare ee sAlinalli : "ಆನಂದ, ಆಶ್ಚರ್ಯ ಎದೆ ತುಂಬಿದೆ"
ಆನಂದ OK, ಆಶ್ಚರ್ಯ yAke?
swalpa badalAvaNe agatya ansatte...

PS : idu nanna vaiyuktika aBiprAyavaShTE. no offence meant.

Overalla kavanada dhATi, pace, pada prayOga sakattAgide.:)

ಶ್ರೀನಿಧಿ.ಡಿ.ಎಸ್ ಹೇಳಿದರು...

ನಮಸ್ತೆ,
ನಿಮ್ಮ ಒಳ್ಳೆಯ ನುಡಿಗಳನ್ನು ಕಂದು ಸಂತಸವಾಯ್ತು.
ನಾನು ಅಲ್ಲಿ " ಆಶ್ಚರ್ಯ" ಪದ ಬಳಸಿದ್ದು, "suprise" ಆಗಿದೆ ಎಂಬ ಕಾರಣಕ್ಕಾಗಿ.

bhadra ಹೇಳಿದರು...

ಬಹಳ ಸುಂದರವಾಗಿ ನೇಯ್ದ ಕವನ.

ಒಳ್ಳೆಯದಾಗಲಿ

ಶ್ರೀನಿಧಿ.ಡಿ.ಎಸ್ ಹೇಳಿದರು...

dhanyavaadagaLu, ta vi shree.

Manjunatha Kollegala ಹೇಳಿದರು...

ತುಂಬಾ ಚೆನ್ನಾಗಿದೆ. ಅಚಾನಕ್ ಆಗಿ ನಿಮ್ಮ blog visit ಮಾಡಿದೆ, a nice visit, indeed

ಮೌನಿ ಹೇಳಿದರು...

ನಾನು ಮೊದಲ ಬಾರಿಗೆ ಇದನ್ನು ನೋಡಿದೆ.....
ನನಗೂ ಕವನಗಳೆಂದರೆ ಇಷ್ಟ...(ಓದಲು,ಬರೆಯಲು)
ತುಂಬಾ ಚೆನ್ನಾಗಿ, ಸರಳವಾಗಿ ಬರೆದಿದ್ದೀರಿ....

ಗುರುದಾಸ.....