ಸೋಮವಾರ, ಸೆಪ್ಟೆಂಬರ್ 25, 2006

ಭಾವ-೪

ಮಾಸಿದ ಬಟ್ಟೆ ತೊಟ್ಟು ಪಾರ್ಕೊಂದರ ಬೆಂಚಲ್ಲಿ ಕುಳಿತಿದ್ದ ಆ ಮುದುಕ,ತನ್ನ ಬಳಿಯಿದ್ದ ಹರಿದ ಗಂಟೊಂದರಿಂದ ಅಕ್ಕಿ ಕಾಳನ್ನ ತೆಗೆತೆಗೆದು ಮುಂದಿದ್ದ ಪಾರಿವಾಳಗಳಿಗೆ ಬೀರುತ್ತಿದ್ದ, ಮುಗುಳುನಗುತ್ತಾ.. ಬದುಕು ಸುಂದರವಾಗಿದೆ, ಅಲ್ಲವೆ?!

1 ಕಾಮೆಂಟ್‌:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಚಿಂದಿ ಬಟ್ಟೆಯ ಒಳಗಿನ ಚಿನ್ನವೆನಿಸಿಬಿಡುವ ಬದುಕು, ಹಲವು ಕಣ್ಣುಗಳಲಿ ಹರಿವ ಬೆಳಕು....ಉಳಿದವಕೆ ಕುರುಡು ಕತ್ತಲೆಯಾಳದ ಕನಸು.
ಚೆನ್ನಾಗಿದೆ. ಪುಟ್ಟ ಕೊಕ್ಕಿಗೆ ಅಕ್ಕಿ ಬೀರುವ ಹೊನ್ನ ಮನದ ದಣಿಗೆ ನನ್ನ ನಮಸ್ಕಾರ.